ರೈತರ 1 ಲಕ್ಷವರೆಗಿನ ಸಾವಿರ ಕೋಟಿ ಸಾಲ ಮನ್ನಾಕ್ಕೆ ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ


ಕೊಪ್ಪಳ ಜಿಲ್ಲೆಯ 98 ಸಹಕಾರ ಸಂಘಗಳ 23976 ರೈತರ ರೂ.12168.10 ಲಕ್ಷ ಹೊರಬಾಕಿ ಸಾಲ

– 147 ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿರುವ 67507 ರೈತರ ಅಂದಾಜು 996 ಕೋಟಿ

– ಬ್ಯಾಂಕುಗಳಿಗೆ ದಾಖಲಾತಿ ಮಾಹಿತಿ ಸಲ್ಲಿಸಲು ಡಿ.15 ರಿಂದ 28ರ ವರೆಗೆ ಕಾಲವಕಾಶ-ಡಿ.ಸಿ. ಸುನೀಲ್ ಕುಮಾರ

ಕೊಪ್ಪಳ : ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಸಹಕಾರ ಸಂಘಗಳ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ರೈತರ ಬೆಳೆ ಸಾಲ ಮನ್ನಾ ಸೌಲಭ್ಯವನ್ನು ರೈತಸಮುದಾಯಕ್ಕೆ ತಲುಪಿಸಲು ಜಿಲ್ಲಾಡಳಿತ ಸಿದ್ಧತೆಯನ್ನು ಕೈಗೊಂಡಿದೆ.

2018 10.07  ಸಹಕಾರ ಸಂಘಗಳಲ್ಲಿನ ಸುಮಾರು 23976 ರೈತರ ರೂ. 12168.10 ಲಕ್ಷಗಳ ಹೊರಬಾಕಿ ಸಾಲವಿದ್ದು, ಈ ಪೈಕಿ ರೂ. 1.00 ಲಕ್ಷಗಳವರೆಗಿನ ಸಾಲ ಮನ್ನಾ ಮೊತ್ತವು ರೂ. 10410.34 ಲಕ್ಷಗಳಿದ್ದು, ಅದರಂತೆ 147 ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲಪಡೆದಿರುವ ಸುಮಾರು 67507 ರೈತರ ಅಂದಾಜು 996 ಕೋಟಿ ರೂಪಾಯಿಗಳ ಮೊತ್ತದವರೆಗೆ ಸಾಲ ಮನ್ನಾ ಆಗಲಿದ್ದು ಇದಕ್ಕೆ ಸರ್ಕಾರದ ನಿಯಾಮಾಳಿಯಂತೆ ಸಾಲ ಮನ್ನಾ ಲಾಭವನ್ನು ರೈತರಿಗೆ ತಲುಪಿಸಲು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರು ಜಿಲ್ಲಾಡಳಿತದಿಂದ ಕಳೆದ ತಿಂಗಳಿಂದ ಕೈಗೊಂಡಿರುವ ಕ್ರಮಗಳಿಂದ ಜಿಲ್ಲೆಯ ರೈತರಿಗೆ ವರದಾನವಾಗಲಿದೆ ಎಂದು ಹೇಳಬಹುದು.

ಕಂದಾಯ ಇಲಾಖೆಯು ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿ ಸಾಲಮನ್ನಾ ಮಾಹಿತಿಯನ್ನು ಅಳವಡಿಸಲು ಸರ್ಕಾರ ನಿರ್ದೇಶನದಂತೆ ಜಿಲ್ಲೆಯ 98 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 52 ಕಾಲಂಗಳಲ್ಲಿ ರೈತ ಸದಸ್ಯರ ಮಾಹಿತಿ ಹಾಗೂ ಫಲಾನುಭವಿ ರೈತ ಸದಸ್ಯರ ಸ್ವಯಂ ದೃಢೀಕರಣಗಳನ್ನು ಡಾಟಾ ಎಂಟ್ರಿ ಕಾರ್ಯ ನಡೆಸಲಾಗಿದ್ದು, ಈ ಮಾಹಿತಿಗಳನ್ನು ಪರಿಶೀಲಿಸಿ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಗತಿ ಹಂತದದಲ್ಲಿ ಇದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ರೈತರ ಸಾಲ ಮನ್ನಾ ಯೋಜನೆಗೆ ವಿಶೇಷವಾದ ಆಸಕ್ತಿಯನ್ನು ತೆಗೆದುಕೊಂಡಿದ್ದು, ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರ ಸಾಲ ಮನ್ನಾ ಪ್ರಯೋಜನೆಯನ್ನು ರೈತರು ಪಡೆದುಕೊಳ್ಳಲು ಡಿ. 15 ರಿಂದ ಸಂಬಂಧಿಸಿದ ಬ್ಯಾಂಕ್‌ಗಳಿಗೆ ರೈತರು ಸಾಲದ ದಾಖಲೆಗಳನ್ನು ಮತ್ತು ಸ್ವಯಂ ದೃಢೀಕರಣ ನೀಡಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.

ಸರ್ಕಾರವು ಆದೇಶ ಸಂ.ಸಿಪಿ163 ಸಿಎಲ್‌ಎಸ್ 2018 ಬೆಂಗಳೂರು ದಿನಾಂಕ: 14.08.2018 ರ ಮೂಲಕ ರಾಜ್ಯದ ಸಹಕಾರ ಸಂಸ್ಥೆಗಳು / ಬ್ಯಾಂಕುಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ ದಿನಾಂಕ: 10.07.2018 ಕ್ಕೆ ಹೊಂದಿರುವ ಹೊರಬಾಕಿ ಮೊತ್ತದಲ್ಲಿ ಒಂದು ರೈತ ಕುಟುಂಬಕ್ಕೆ ಗರಿಷ್ಠ ರೂ. 1.00 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಿದ್ದು ಇರುತ್ತದೆ.

ಪ್ರತಿ 500 ಕ್ಕಿಂತ ಹೆಚ್ಚಿನ ಸಂಖ್ಯೆ ಇರುವ ಬ್ಯಾಂಕಿನಲ್ಲಿ ರೈತರು ತಮ್ಮ ದಾಖಲೆಗಳನ್ನು ಸಲ್ಲಿಸಿ ಹೆಸರು ನೋಂದಾಯಿಸಲು ನೂಕು ನುಗ್ಗಲು ಉಂಟಾಗದಂತೆ ಅಗತ್ಯ ಬಂದೋಬಸ್ತ ಒದಗಿಸಲು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ದು. ಹಾಗೂ ಬ್ಯಾಂಕ್‌ಗಳಲ್ಲಿ ರೈತರು ಶಾಂತಿಯುತವಾಗಿ ತಮ್ಮ ದಾಖಲೆಗಳನ್ನು ಸಲ್ಲಿಸಲು ಅನುಕೂಲವಾಗಲು ರೈತರಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ 08539-220854 ತೆರೆಯಲಾಗಿದ್ದು ಅಲ್ಲದೇ ಮೂರು ಜನ ಸಿಬ್ಬಂದಿಗಳನ್ನು ಇದೇ ಕಾರ್ಯಕ್ಕಾಗಿ ನಿಯೋಜನೆಯನ್ನು ಮಾಡಲಾಗಿದೆ.

ಆಧಾರ ಕಾರ್ಡ, ಪಡಿತರ ಚೀಟಿ, ಜಮೀನು ಸ.ನಂ. ಪಹಣಿ ಪತ್ರಿಕೆ ಕಡ್ಡಾಯ : ಬೆಳೆ ಸಾಲ ಮನ್ನಾ ಯೋಜನೆಯಡಿ ನೋಂದಾಯಿಸಿಕೊಳ್ಳಲು 31.12.2017 ರೊಳಗಾಗಿ ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ತಾವು ಸಾಲ ಪಡೆದ ವಾಣಿಜ್ಯ ಬ್ಯಾಂಕ್‌ಗಳಿಗೆ ಡಿ.15 ರಿಂದ ಡಿ. 28 ರವೆರೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟಿದ್ದು, ರೈತರ ಬೆಳೆ ಸಾಲ ಮನ್ನಾ ಯೋಜನೆಯಂತೆ ರೈತರು ತಮ್ಮ ಸಾಲದ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಆಧಾರ ಕಾರ್ಡ, ಪಡಿತರ ಚೀಟಿ, ಜಮೀನು ಸ.ನಂ. ಪಹಣಿ ಪತ್ರಿಕೆ ವಿವರಗಳನ್ನು ಸಲ್ಲಿಸಬೇಕು.

ಪ್ರತಿ ದಿನ ಕನಿಷ್ಠ 40 ರೈತರ ನೋಂದಣೆ : ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿ ದಿನ ಕನಿಷ್ಠ 40 ರೈತರ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಅವಕಾಶವಿದ್ದು, ತದನಂತರ ರೈತರಿಗೆ ದಿನಾಂಕ ನಮೂದಿಸಿ ಟೋಕನ್‌ಗಳನ್ನು ನೀಡುವ ವ್ಯವಸ್ಥೆ ಇದೆ. ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ದಿನಾಂಕ: 01.04.2009 ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆ ಸಾಲಗಳು ಮತ್ತು 31.12.2017ರ ವರೆಗೆ ಬಾಕಿ ಇರುವ ಬೆಳೆ ಸಾಲಗಳು ಅಂದರೆ ಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್.ಪಿ.ಎ ಸಾಲಗಳು ಮಾತ್ರ ಅರ್ಹವಾಗಿರುತ್ತವೆ ಎಂದು ಹೇಳಲಾಗಿದೆ.

“ಕೊಪ್ಪಳ ಜಿಲ್ಲೆಯಲ್ಲಿ 10.07.2018 ರಿಂದ ನವಂಬರ್-2018 ರವರೆಗೆ ಒಟ್ಟು 2893 ಫಲಾನುಭವಿಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಆರ್.ಡಿ.ಸಿ.ಸಿ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ತಾಲುಕು ಸಹಕಾರ ಅಭಿವೃದ್ಧಿ ಅಧಿಕಾರಿಗಳು ಅನುಮೋದಿಸಿರುತ್ತಾರೆ, ಆ ಪೈಪಿ 442 ರೈತರ ರೂ. 227.19 ಲಕ್ಷಗಳ ಮೊತ್ತವು ಸರ್ಕಾರದಿಂದ ಫಲಾನುಭವಿ ರೈತ ಸದಸ್ಯರ ಉಳಿತಾಯ ಖಾತೆಗೆ ಜಮಾ ಆಗಿರುತ್ತದೆ –ಪಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿಗಳು ಕೊಪ್ಪಳ”

-ಮೌಲಾಹುಸೇನ ಬುಲ್ಡಿಯಾರ್

Leave a Reply

Your email address will not be published.