ಗೋಕಾಕ: ಇಜತ್ಮಾ ಕಾರ್ಯಕ್ರಮ ಯಶಸ್ವಿಗೆ ಲಖನ್ ಜಾರಕಿಹೊಳಿ ಶುಭಹಾರೈಕೆ


ಗೋಕಾಕ: ಪ್ರತಿಯೊಬ್ಬ ಮನುಷ್ಯನ ಜನ್ಮ ಸಾರ್ಥಕವಾಗಲು ಆಧ್ಯಾತ್ಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕವಾಗಿವೆ ಈ ನಿಟ್ಟಿನಲ್ಲಿ ಮುಸ್ಲಿಂ ಸಮಾಜ ಭಾಂದವರು ಹಮ್ಮಿಕೊಂಡಿರುವ ಇಜತ್ಮಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಯುವ ಧುರೀಣ ಲಖನ್ ಜಾರಕಿಹೊಳಿ ಶುಭಹಾರೈಸಿದರು.

ನಗರದ ಹೊರವಲಯದ ಮಾಲದಿನ್ನಿ ಕ್ರಾಸ್ನಲ್ಲಿ ಡಿ,22,23,24ರ ವರೆಗೆ ಸತತ ಮೂರು ದಿನಗಳ ವರೆಗೆ ನಡೆಯಲಿರುವ ಇಜತ್ಮಾ ಕಾರ್ಯಕ್ರಮದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿ, ಇಸ್ಲಾಂ ಧರ್ಮ ಶಾಂತಿಯ ಸಂಕೇತವಾಗಿದ್ದು ಎಲ್ಲ ಧರ್ಮಿಯರ ಜೊತೆಗೆ ಅವಿನಾಭಾವ ಸಂಭಂದಹೊಂದಿದೆ ಎಂದರು.
ಯಾಂತ್ರಿಕತೆಗೆ ಶರಣಾಗಿರುವ ಇಂದಿನ ಯುವಜನತೆ ಆಧ್ಯಾತ್ಮದತ್ತ ನಡೆದು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಮುಸ್ಲಿಂ ಭಾಂದವರು ಹಮ್ಮಿಕೊಂಡಿರುವ ಈ ಇಜತ್ಮಾ ಗೋಕಾವಿ ನಾಡಿಗೆ ಹೆಮ್ಮೆಯ ವಿಷಯ. ಇಜತ್ಮಾ ಕಾರ್ಯಕ್ರಮಕ್ಕೆ ಬರುವ ಸುಮಾರು 6ಜಿಲ್ಲೆಗಳ ಮುಸ್ಲಿಂ ಭಾಂದವರು ಆಗಮಿಸುತ್ತಿದ್ದು ಅವರಿಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕುತುಬುದ್ದಿನ ಗೋಕಾಕ, ಅಮೀರಸಾಬ ಬಸ್ಸಾಪೂರ, ಅಂಜುಮನ್ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ, ಪ್ರಥಮ ದರ್ಜೆ ಗುತ್ತಿಗೇದಾರ, ಆಶೀಫ್ ಎಚ್ ಮುಲ್ಲಾ, ಅಶೋಕ ಸಾಯನ್ನವರ, ಜಾಕೀರ ಕುಡಚಿಕರ, ಸಾಧೀಕ ಹಿರೇಕೊಡಿ, ಇಕ್ಬಾಲ ಬಸ್ಸಾಪೂರ, ಶಫೀಕ ತಿಗಡಿ, ದಸ್ತಗೀರಸಾಬ ಶಭಾಶಖಾನ, ಇಸ್ಮಾಯಿಲ್ ಗೋಕಾಕ, ಅಮೀರಸಾಬ ಗೋಕಾಕ, ಮಹಾಂತೇಶ ಗವಿಮಠ, ಇಸ್ಮಾಯಿಲ ಮಲ್ಲಾಪೂರ, ಬಸವರಾಜ ಮೇದಾರ, ಮಲ್ಲೀಕ ಹುಣಚ್ಯಾಳ, ಇಲಾಹಿ ಖೈರದಿ, ಅಬ್ದುಲ ಹಸನ ಪೀರಜಾದೆ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಇದ್ದರು.

Leave a Reply

Your email address will not be published.