ಬೆಳಗಾವಿಯಲ್ಲಿ 5 ನೇ ಪರಿವರ್ತನಾ ದಿನಾಚರಣೆಗೆ ವೇದಿಕೆ ಸಜ್ಜು: ಶ್ರೀಶೈಲ ಅಂಟಿನ್


ಬಾಗಲಕೋಟೆ:  ಮಾನವ ಬಂಧುತ್ವ ವೇದಿಕೆಯು  ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವಾದ ಡಿಸೆಂಬರ್ 6 ರಂದು ಬೆಳಗಾವಿ ಸದಾಶಿವನಗರದ ಬುದ್ಧ, ಬಸವ, ಅಂಬೇಡ್ಕರ ಶಾಂತಿಧಾಮ (ಸ್ಮಶಾನ)ದಲ್ಲಿ 5 ನೇ ಮೌಢ್ಯ ವಿರೋಧಿ ಪರಿವರ್ತನಾ ದಿನ ಆಚರಣೆ ನಡೆಸಲಿದೆ ಎಂದು ಬಾಗಲಕೋಟೆ ಜಿಲ್ಲಾ ಸಂಚಾಲಕ ಶ್ರೀಶೈಲ ಅಂಟಿನ್ ಹೇಳಿದರು.

ಇಂದು ಇಲ್ಲಿನ ಪರ್ತಕರ್ತರ ಭವನದಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ  ನಡೆಯಲಿದ್ದು  ಕಾರ್ಯಕ್ರಮವನ್ನು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಉದ್ಘಾಟಿಸುವರು ಎಂದರು.

ಬಸವಧರ್ಮ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದದೇವರು, ಕಲಬುರಗಿಯ ವಿಶ್ವನಾಥ ಕೊರಣೇಶ್ವರ ಅಪ್ಪಾ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ  ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಚಿಂತಕ , ನಾಡೋಜ ಬರಗೂರು ರಾಮಚಂದ್ರಪ್ಪ ಪ್ರಧಾನ ಭಾಷಣ ಮಾಡುವರು.ಪ್ರೊ. ವಸಂತ ಹಂಕಾರೆ. ಡಾ. ಮೀನಾಕ್ಷಿ ಬಾಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.

ಪ್ರತಿವರ್ಷದಂತೆ ಅಹೋರಾತ್ರಿ ಕಾರ್ಯಕ್ರಮ (24 ಗಂಟೆ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಮಶಾನದಲ್ಲಿಯೇ ಊಟ, ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ.ಬೆಳಗಾವಿಯಲ್ಲಿ 5 ನೇ ಪರಿವರ್ತನಾ ದಿನಾಚರಣೆಗೆ ವೇದಿಕೆ ಸಜ್ಜಾಗಿದ್ದು,  ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಿಂದ ಜನ್ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕರ್ತರಾದ ಜಯರಾಜ ಹಾದಿಕಾರ , ರಾಘು ಭಜಂತ್ರಿ, ಪೀರಸಾಬ ನದಾಫ , ರವಿ ಕಾಂಬಳೆ ಸುದ್ದಿಗೋಷ್ಠಿಯಲ್ಲಿದ್ದರು.

ಇದೇ ವೇಳೆ ಕಾರ್ಯಕ್ರಮದ ಭೀತ್ತಿ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು.

One Response to "ಬೆಳಗಾವಿಯಲ್ಲಿ 5 ನೇ ಪರಿವರ್ತನಾ ದಿನಾಚರಣೆಗೆ ವೇದಿಕೆ ಸಜ್ಜು: ಶ್ರೀಶೈಲ ಅಂಟಿನ್"

  1. SHankar Bagewadi   December 3, 2018 at 6:35 pm

    Super…

    Reply

Leave a Reply

Your email address will not be published.