ನೂತನ ಸಚಿವ ಸತೀಶ ಜಾರಕಿಹೊಳಿ ನಾಳೆ ಬೆಳಗಾವಿಗೆ: ಚನ್ನಮ್ಮ ಸೇರಿ ಮಹಾನ್ ನಾಯಕರಿಗೆ ಮಾಲಾರ್ಪಣೆ


ಬೆಳಗಾವಿ: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಾಳೆ ಮೊದಲ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಸಚಿವ ಸತೀಶ ಜಾರಕಿಹೊಳಿ ಅವರು ಕಿತ್ತೂರು ಚನ್ನಮ್ಮ ಸೇರಿ ವಿವಿಧ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದು, ಬಳಿಕ ಸಮೀಪದ ಅಂಬೇಡ್ಕರ್ ಉದ್ಯಾನಕ್ಕೆ ತೆರಳಿ ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಗೌರವ ಅರ್ಪಿಸಿಲಿದ್ದಾರೆ. 10. 30 ಕ್ಕೆ ಗೋವಾವೇಸ್ ನಲ್ಲಿರುವ ಬಸವೇಶ್ವರ್ ಪುಥಳಿಗೆ ಪುಪ್ಪಾರ್ಚನೆ ಸಲ್ಲಿಸಿ ಶಿವಾಜಿ ಪಾರ್ಕಗೆ ತೆರಳಿ ಶಿವಾಜಿ ಪ್ರತಿಮೆಗೂ ಗೌರವ ಅರ್ಪಿಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ರೇಲ್ವೆ ಮೇಲ್ಸೇತುವೆ ಉದ್ಘಾಟನಾ ಸಮಾಂಭದಲ್ಲಿ ಭಾಗಿಯಾಗಲಿದ್ದು, ನಂತರ ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಹ್ವಾನ ಸ್ವೀಕರಿಸಲಿದ್ದಾರೆ.

One Response to "ನೂತನ ಸಚಿವ ಸತೀಶ ಜಾರಕಿಹೊಳಿ ನಾಳೆ ಬೆಳಗಾವಿಗೆ: ಚನ್ನಮ್ಮ ಸೇರಿ ಮಹಾನ್ ನಾಯಕರಿಗೆ ಮಾಲಾರ್ಪಣೆ"

  1. Shankargouda padesur   December 24, 2018 at 11:58 pm

    I m Shankar padesur from president of protection of Human rights and culture we want to invite to our cultural program to honorable sathish jarakiholi sir.

    Reply

Leave a Reply

Your email address will not be published.