ಪಾಂಡವಪುರ: ಬುದ್ಧಿಮಾಂಧ್ಯ ವ್ಯಕ್ತಿ ನಾಪತ್ತೆ


ಪಾಂಡವಪುರ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ತಾಲ್ಲೂಕಿನ ಕಣಿವೆಕೊಪ್ಪಲು ಗ್ರಾಮದಿಂದ ನಾಪತ್ತೆಯಾಗಿರುವ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲೋಕೇಶಾಚಾರಿ (45) ನಾಪತ್ತೆಯಾದ ವ್ಯಕ್ತಿಯಾಗಿದ್ದು, ಕಳೆದ ನವೆಂಬರ್ ತಿಂಗಳ 19 ರಂದು ಇವರು ಕಣಿವೆ ಕೊಪ್ಪಲು ಗ್ರಾಮದ ತಮ್ಮ ಮನೆಯಿಂದ ಕಾಣೆಯಾಗಿರುತ್ತಾರೆ.

ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣದ ಚಹರೆಯುಳ್ಳ ಕಪ್ಪು, ಬಿಳೆ ಕೂದಲಿನ ವ್ಯಕ್ತಿ ಕಂಡು ಬಂದರೆ ಸಮೀಪದ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪಾಂಡವಪುರ ಪೊಲೀಸರು ಕೋರಿದ್ದಾರೆ.

Leave a Reply

Your email address will not be published.