ಮಾಜಿ ಸಚಿವ ರಮೇಶ ಜಾರಕಿಹೊಳಿ ನಿವಾಸದಲ್ಲಿನ ನಾಮಫಲಕ ತೆರವು


ಬೆಂಗಳೂರು: ರಮೇಶ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನಲೆ ಬೆಂಗಳೂರಿನಲ್ಲಿನ ಅವರ ಸರಕಾರಿ ನಿವಾಸದ ಮೇಲಿದ್ದ ನಾಮಫಲಕವನ್ನು ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.

ಇಲ್ಲಿನ ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ನಲ್ಲಿರುವ ರಮೇಶ ಜಾರಕಿಹೊಳಿ ಅವರ ನಿವಾಸದಲ್ಲಿ ಹಾಕಲಾಗಿದ್ದ ಪೌರಾಡಳಿತ ಸಚಿವ ಎಂಬ ನಾಮ ಫಲಕವನ್ನು ಸಿಬ್ಬಂದಿ ಬಿಳಿ ಹಾಳೆಯಿಂದ ಮುಚ್ಚಿದ್ದಾರೆ.

ಡಿ. 22 ರಂದು ದೋಸ್ತಿ ಸರಕಾರದ ಕಾಂಗ್ರೆಸ್  ಸಚಿವ ಸಂಪುಟ ಪುನರ್ ರಚನೆಯಲ್ಲಿ ರಮೇಶ ಜಾರಕಿಹೊಳಿ ಅವರ ಕೈ ಬಿಡಲಾಗಿದ್ದು, ಅವರ ಸಹೋದರ ಸತೀಶ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಲಾಗಿದೆ.

ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನಲೆ ರಮೇಶ ಜಾರಕಿಹೊಳಿ ಅವರು ಸರಕಾರದ ವಿರುದ್ದ ಮುನಿಸಿಕೊಂಡಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ  ಸಚಿವ ಸತೀಶ ಜಾರಕಿಹೊಳಿ ಸೇರಿ ಹಲವರು ಪ್ರತಿಕ್ರಿಯಿಸಿದ್ದು, ರಮೇಶ ಜಾರಕಿಹೊಳಿ ಪಕ್ಷ ಬಿಡುವುದಿಲ್ಲ. ಶಾಸಕರಾಗಿಯೇ ಕೆಲಸ ಮಾಡುತ್ತಾರೆ. ಅವರ ಅಸಮಾಧಾನದ ಬಗ್ಗೆ ನಾನು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡೋದಾಗಿಯೂ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

Leave a Reply

Your email address will not be published.