ಪ್ರಗತಿಪರರು ಬ್ರಾಹ್ಮಣ ವಿರೋಧಿಗಳಲ್ಲ, ಬ್ರಾಹ್ಮಣತ್ವದ ವಿರೋಧಿಗಳು: ನಿಜಗುಣಾನಂದ ಶ್ರೀ


ಲಿಂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ವೇದಿಕೆ ಬೆಳಗಾವಿ:  ಪ್ರಗತಿಪರರು ಯಾರೂ ಬ್ರಾಹ್ಮಣ ವಿರೋಧಿಗಳಲ್ಲ, ಬ್ರಾಹ್ಮಣತ್ವದ ವಿರೋಧಿಗಳು. ಒಂದು ವೇಳೆ ನಾವೆಲ್ಲ ಬ್ರಾಹ್ಮಣರನ್ನು ವಿರೋಧಿಸುತ್ತೇವೆ ಎಂದಾದರೆ ಬಸವಣ್ಣನನ್ನೂ ವಿರೋಧಿಸಬೇಕಾಗುತ್ತದೆ ಎಂದು ಬೈಲೂರು ಹಾಗೂ ಮುಂಡರಗಿ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಶಾಸಕ ಸತೀಶ ಜಾರಕಿಹೊಳಿ ಸಂಸ್ಥಾಪಕತ್ವದ ಮಾನವ ಬಂಧುತ್ವ ವೇದಿಕೆಯು ಮಹಾಪರಿನಿರ್ವಾಣ ದಿನದ ಪ್ರಯುಕ್ತ ಸದಾಶಿವನಗರದ ಬುದ್ಧ ಬಸವ ಅಂಬೇಡ್ಕರ್ ಶಾಂತಿಧಾಮ ( ಸ್ಮಶಾನ) ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಾತಿ ಹೋಗಲಾಡಿಸಬೇಕು ಎಂದು ಹೋರಾಟ ಮಾಡಿದಕ್ಕೆ ಬಸವಣ್ಣನವರನ್ನು ಓಡಿಸಿದವರು, ಈ ದೇಶದ ಸನಾತನವಾದಿಗಳು. ಪ್ರಗತಿಪರರರನ್ನು ಗುಂಡಿಟ್ಟು ಕೊಲ್ಲುವ ಪರಿಸ್ಥಿತಿ ಇದೆ.

ರಾಜಕೀಯ ಪಕ್ಷಗಳು ಏಕ ಸಂಸ್ಕೃತಿ ಪರಾಕಾಷ್ಟೆ ಹೇರುತ್ತಿವೆ. ಸಮುದಾಯದಲ್ಲಿ ವೈಚಾರಿಕೆತೆ  ಬೆಲೆ ಇಲ್ಲವಾಗಿದೆ. ಸನಾತವಾದಿಗಳು ವಿಜೃಂಭಿಸುತ್ತಿದ್ದಾರೆ.

ಬುದ್ದನನ್ನು ಓಡಿಸಿದ ಸಮುದಾಯ, ಬಸವಣ್ಣ ಗಡಿಪಾರು ಮಾಡಿದವರು ಕಲಬುರ್ಗಿಯವರನ್ನು ಕೊಂದ, ಗೌರಿಯವರನ್ನು ಗುಬ್ಬಿಯಂತೆ ಸಾಯಿಸಿದ ಸಮುದಾಯವಿದೆ. ಪ್ರಗತಿಪರ ವಿಚಾರಗಳಿಗೆ ಬೆಳಗಾಯಿತು ಎಂದರೆ ಜೀವ ಬೆದರಿಕೆ ಎದುರಿಸುವ ಸ್ಥಿತಿ ಇದೆ.

ದೇಶ ತುಪ್ಪ ತಿಂದವರಿಂದ ಹಾಳಾಗಿದೆ ಹೊರತು  ಮಾಂಸತಿಂದವರಿಂದಲ್ಲ.ಎಲ್ಲಿಯವರೆಗೂ ದೇವರು ಮತ್ತು ಧರ್ಮದ ಬಗ್ಗೆ ಸ್ಪಷ್ಟೀಕರಣವಾಗುವುವರೆಗೂ ಅಲ್ಲಿಯವರೆಗೆ ಮನುವಾದಿಗಳು ನಿಮ್ಮನ್ನು ಆಳುತ್ತಾರೆ. ನಾವು ಜಾಗೃತಿಯಾಗಬೇಕಿದೆ. ಶಂಕರಾಚಾರ್ಯರಿಂದ, ಮಧ್ವಾಚಾರ್ಯರಿಮದ ನಮಗೆ ನ್ಯಾಯ ಸಿಕ್ಕಿಲ್ಲ. ಅವರಿಂದ ಧರ್ಮದ ಬಗ್ಗೆ ಪ್ರಚಾರ ಸಿಕ್ಕಿದೆ ಹೊರತು ನಮಗೆ ನ್ಯಾಯ ಸಿಕ್ಕಿಲ್ಲ.  ಡಾ.ಬಾಬಾ ಸಾಹೇಬ್  ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದ ನಮಗೆ ನ್ಯಾಯ ಸಿಕ್ಕಿದೆ ಎಂದರು.

ಪೂಜಾರಿ ಎಂಬ ದಲ್ಲಾಳಿಯನ್ನು  ಬಿಟ್ಟರೆ ಮಾತ್ರ ದೇಶ ಉದ್ದಾರವಾಗುತ್ತದೆ, ಮನುವಾದಿಗಳು ಎಂದೆಂದು ಯಾವ ದೇವಸ್ಥಾನದಲ್ಲಿಯೂ ತಲೆ ಬೋಳಿಸಿಕೊಳ್ಳುವುದಿಲ್ಲ. ತಮ್ಮ ತಂದೆ ತಾಯಿ ಸತ್ತ ಬಳಿಕ ಮಾತ್ರ ತಲೆ ಬೋಳಿಸಿಕೊಳ್ಳುತ್ತಾರೆ. ಅವರು  ನುಡಿದಂತೆ ನಡೆಯಲ್ಲ ಎಂದು ದೂಷಿಸಿದರು.

ಅಂಬೇಡ್ಕರ್ ಅವರಿಗೆ ಮದುವೆ ಮಾಡಲು ಜಾಗ ಕೊಡಲಿಲ್ಲ. ಸಂಸ್ಕೃತಿ ಪರಂ ಪರೆಯಿಂದ ಉಳಿಸಿದವರು, ಬಸವಣ್ಣ, ರಾಷ್ಟ್ರವನ್ನು ಕಟ್ಟುವುದರ ಜತೆಗೆ ದೇಶವನ್ನು ರಾಷ್ಟ್ರಧರ್ಮಕ್ಕೆ ಪರಚಿಯಿಸಿದ್ದಾರೆ. ಬಳಿಕ ಭಾರತದ ಸಂಸ್ಕೃತಿಯನ್ನು ಉಳಿಸಿದವರು ಅಂಬೇಡ್ಕರ್. ಸಂವಿಧಾನವನ್ನು ಬದಲಾಯಿಸಲು  ಹೊರಟಿರುವ ರಾಜಕಾರಣಿಗಳು, ಸಂವಿಧಾನ ಸುಡುತ್ತಾರೆ ಎಂದರೆ ನೀವು ಮೀಸಲಾತಿ ದಲಿತರಾಗಬೇಡಿ ಎಂದು ಕಿವಿಮಾತು ಹೇಳಿದರು.

ಅಂಬೆಡ್ಕರ್, ಬುದ್ದ, ಬಸವಣ್ಣನವ ವಿಚಾರಧಾರೆಗಳು ಉಳಿಯಬೇಕು. ಉತ್ತರಭಾರತದಲ್ಲಿ ರಾಮನ ಹಿಡಿದು  ರಾಜಕೀಯಮಾಡಿದರೆ ದಕ್ಷಿಣ ಭಾರತದಲ್ಲಿ ಶಬರಿಮಲೆ ಹಿಡಿದು  ರಾಜಕೀಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನನಗೆ ಬುದ್ದನ ಶಾಂತಿ ಬೇಕಾಗಿದೆ. ಬಸವಣ್ಣನ  ಭಕ್ತಿ ಬೇಕಿದೆ ಈ ಹಿನ್ನೆಲೆಯಲ್ಲಿ ನಾವು ಮಾತನಾಡುತ್ತೇವೆ. ಈ ವೇದಿಕೆ ಬ್ರಾಹ್ಮಣರ ವಿರೋಧಿಯಲ್ಲ ಬದಲಾಗಿ ಬ್ರಾಹ್ಮಣತ್ವದ ವಿರೋಧಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಕಾರ್ಯಕ್ರಮ ಉದ್ಘಾಟಿಸಿದರು.  ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಹಿರಿಯ ಸಾಹಿತಿ, ಚಿಂತಕ , ನಾಡೋಜ ಬರಗೂರು ರಾಮಚಂದ್ರಪ್ಪ, ಪ್ರೊ. ವಸಂತ ಹಂಕಾರೆ. ಡಾ. ಮೀನಾಕ್ಷಿ ಬಾಳಿ, ಪ್ರಗತಿಪರರು, ಸಾಹಿತಿಗಳು ಇತರರು ಇದ್ದರು. ಮಾನವ ಬಂಧುತ್ವ ವೇದಿಕೆ ತಂಡದವರು ವೈಚಾರಿಕ ಗೀತೆ ಹಾಡಿದರು. ವೇದಿಕೆ ರಾಜ್ಯ ಸಂಚಾಲಕ ವಿಲ್ ಪ್ರೆಡ್ ಡಿಸೋಜಾ ಸ್ವಾಗತ ಕೋರಿ ಪ್ರಾಸ್ತವಿಕ ಮಾತನಾಡಿದರು. ವಿಭಾಗೀಯ ಸಂಚಾಲಕ ಅನಂತ ನಾಯಕ ನಿರೂಪಿಸಿದರು, ಆರ್. ಜಯಕುಮಾರ್ ವಂದಿಸಿದರು.

Leave a Reply

Your email address will not be published.