ಮಸೀದಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ


ಪಾಂಡವಪುರ: ಪಟ್ಟಣದ ಮಸ್ಜೀದೆ ಆಲಾ ಅಹಲೆ ಸುನ್ನತುಲ್ ಜಮಾತ್ ಮಸೀದಿಯ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಿ.ಎಸ್.ಪುಟ್ಟರಾಜು ಸೋಮವಾರ ಚಾಲನೆ ನೀಡಿದರು.

ಬೆಳಿಗ್ಗೆ ಸುಮಾರು 9.30ಕ್ಕೆ ಮಸೀದಿಗೆ ಆಗಮಿಸಿದ ಸಚಿವರನ್ನು ಮಸೀದಿಯ ಆಡಳಿತ ಮಂಡಳಿಯವರು ಸಚಿವರನ್ನು ಗೌರವಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಮಸೀದಿಯ ಧರ್ಮಗುರು ಸಲ್ಮಾನ್ ರಜಾ ಅವರ ಮಂತ್ರ ಪಠಣದ ನಡುವೆ ಸಚಿವ ಪುಟ್ಟರಾಜು ಭೂಮಿ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಮಸೀದಿ ಆಡಳಿತ ಮಂಡಳಿಯವರು ನೆಲಹಂತ ನಿರ್ಮಾಣಕ್ಕೆ ಸಿದ್ಧತೆ ನಡೆಸಿರುವ ಬಗ್ಗೆ ತಿಳಿದು ಬಂದಿದ್ದು, ಇದರ ಕಾಮಗಾರಿ ಮುಗಿದ ನಂತರ ಮೊದಲನೇ ಹಂತ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಹೇಳಿದರು.

ಇತರೆ ಮುಸ್ಲಿಂ ಸಮುದಾಯದ ಯಾವುದೇ ಸಮಸ್ಯೆಗಳಿದ್ದರೂ ಹಂತ ಹಂತವಾಗಿ ಬಗೆಹರಿಸುವುದಾಗಿ ಹೇಳಿದರು.
ಮಸ್ಜಿದೇ ಆಲಾ ಮಸೀದಿಯ ಅಧ್ಯಕ್ಷ ಮೊಹಮ್ಮದ್ ಹನೀಫ್, ಪುರಸಭೆ ಸದಸ್ಯರಾದ ಇಮ್ರಾನ್ ಷರೀಫ್, ಸೋಮಶೇಖರ್, ಪುರಸಭೆ ಮಾಜಿ ಉಪಾಧ್ಯಕ್ಷ ಮಹಮ್ಮದ್ ಗೌಸ್, ಮುಖಂಡರಾದ ವಾಹಿದ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಧರ್ಮರಾಜು, ಸೈಯದ್ ಹಮೀದ್, ಮಸೀದಿ ಉಪಾಧ್ಯಕ್ಷ ಮುಜಾಹಿದ್, ನಿರ್ದೇಶಕರಾದ ಮಜರ್ ಪಾಷ, ನಜೀರ್ ಅಹಮದ್, ಮುಕ್ತಾರ್ ಪಾಷ, ಸೈಯದ್ ಪೀರ್, ಕಲೀಂ, ಸೈಯದ್ ಆಬೀದ್, ಗೌಸ್ ಪಾಷ, ಸಮಿಉಲ್ಲಾ, ಮುನವರ್ ಪಾಷ, ಮುಮ್ತಾಜ್, ಶೌಕತ್ ಉಲ್ಲಾ, ಫಯಾಸ್, ಫಾರೂಖ್, ವಸೀಂ ಅಹಮದ್, ಜಾಹಿದ್ ಹುಸೇನ್, ಪಿ.ಪಾಷ, ಅಜೀಜ್ ಪಾಷ ಮುಂತಾದವರು ಇದ್ದರು.

Leave a Reply

Your email address will not be published.