ಪ್ರೊ. ಭಗವಾನ್ ಮನೆ ಮುಂದೆ ಬಿಗಿ ಬಂದೋಬಸ್ತ್


ಮೈಸೂರು: ಪ್ರೊ. ಭಗವಾನ್ ರಚಿಸಿರುವ ರಾಮ ಮಂದಿರ ಏಕೆ ಬೇಡ?  ಪುಸ್ತಕ ವಿವಾದಕ್ಕೀಡಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಪ್ರೊ. ಭಗವಾನ್ ಮನೆ ಎದುರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.

ರಾಮ ಮದ್ಯಪಾನ ಪಾನ ಮಾಡುತ್ತಿದ್ದ. ಮಾಂಸ ಸೇವಿಸುತ್ತಿದ್ದ ಎಂಬ ಅಂಶಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದರು. ರಾಮ ಭಕ್ತರು ಪ್ರೊ. ಭಗವಾನ್ ವಿರುದ್ದ ಗರಂ ಆಗಿದ್ದು,  ಸಾಮಾಜಿಕ‌ ಹೋರಾಟಗಾರ ನಿಶಾಂತ್, ಪ್ರೊ.ಭಗವಾನ್ ಮನೆ ಮುಂದೆ ಶ್ರೀರಾಮನ ಪೂಜೆಗೆ ನಿರ್ಧರಿಸಿದ್ದ.

ಈ ಹಿನ್ನೆಲೆಯಲ್ಲಿ   ಎಸಿಪಿ ಧರ್ಮಪ್ಪ, ಕುವೆಂಪು ನಗರ‌ ಪೋಲಿಸ್ ಇನ್ಸ್ಪೆಕ್ಟರ್ ಆರ್ ವಿಜಯ್ ಕುಮಾರ್, ಕೆ ಆರ್ ಠಾಣೆ ಇನ್ಸ್ಪೆಕ್ಟರ್ ಪ್ರಕಾಶ್, ನೇತೃತ್ವದಲ್ಲಿ   ಮುಂಜಾಗೃತಾ ಕ್ರಮವಾಗಿ ಪ್ರೊ. ಭಗವಾನ್ ಮನೆ ಎದುರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ಒಂದು ಸಿಆರ್​ಎ ತುಕಡಿ, ಒಂದು ಕೆಎಸ್​ಆರ್​ಪಿ ತುಕಡಿ, ಒಂದು ಕಮಾಂಡೋ ಪಡೆ, ಕುವೆಂಪು ನಗರ , ಆಶೋಕಪುರಂ, ವಿದ್ಯಾರಣ್ಯಪುರ, ಸರಸ್ವತಿಪುರಂ, ಕೆ ಆರ್ ಠಾಣೆ, ಲಕ್ಚ್ಮೀಪುರಂ ಠಾಣೆಯಿಂದ ಒಟ್ಟು 30 ಸಿವಿಲ್ ಪಿಸಿಗಳಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ಕುವೆಂಪು ನಗರ ಪೊಲೀಸ್ ಠಾಣೆ ಸಿಬ್ಬಂದಿ ಭಗವಾನ್ ಮನೆ ಮುಂದೆ ಬ್ಯಾರಿಕೆಡ್ ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ನಿಶಾಂತ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published.