ಸಿದ್ದರಾಮಯ್ಯ -ಸಚಿವ ರಮೇಶ ಜಾರಕಿಹೊಳಿ ಏನೇನ್ ಮಾತಾಡಿಕೊಂಡ್ರು ?!


ಬೆಳಗಾವಿ: ಸಚಿವ ಡಿಕೆಶಿ ಔತಣಕೂಟದಿಂದ ದೂರ ಉಳಿದು ಭಾರತೀಯ ಜನತಾಪಕ್ಷದ ಮಹಾಂತೇಶ ಕವಟಗಿಮಠ ಏರ್ಪಡಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಂಆಡಿ ಮಾತುಕತೆ ನಡೆಸಿದರು.

ಬೆಳಗಾವಿ ಸರ್ಕೀಟ್ ಹೌಸ್ ಗೆ ಸಚಿವರನ್ನು ಕರೆಸಿಕೊಂಡ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಬಿಜೆಪಿಯವರ ಜತೆಗೆ ಹೋಗಬಾರದು ಎಂದು ರಮೇಶ ಜಾರಕಿಹೊಳಿಗೆ ಸೂಚನೆ ನೀಡಿದರು.

ಮಹಾಂತೇಶ ಕವಟಗಿಮಠ ನಮ್ಮ ಜಿಲ್ಲೆಯವರು. ಎಲ್ಲರನ್ನೂ ಊಟಕ್ಕೆ ಕರೆದಿದ್ದರು. ಅದಕ್ಕಾಗಿ ಹೋಗಿದ್ದೆ ಅಷ್ಟೇ ಎಂದು ಸಚಿವ ರಮೇಶ ಸಮಜಾಯಿಷಿ ನೀಡಿದರು.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಚಿವೆ ಜಯಮಾಲಾ ಕೂಡ ಔತಣಕೂಟದಲ್ಲಿ ಭಾಗಿಯಾದ ಬಗ್ಗೆ ಸಮಜಾಯಿಷಿ ನೀಡಿದರಲ್ಲದೇ ಸಂಪುಟದಿಂದ ತಮ್ಮನ್ನು ಕೈಬಿಡದಿರುವಂತೆ ಮನವಿ ಮಾಡಿದರು. ಶಾಸಕ ಬಿ. ನಾಗೇಂದ್ರ ಕೂಡ ಸಚಿವರೊಂದಿಗಿದ್ದರು.

Leave a Reply

Your email address will not be published.