ಮುಖ್ಯಮಂತ್ರಿ ಆಗುವ ಅವಕಾಶ ಬಂದಾಗ ನೋಡೋಣ ಎಂದ್ರು ಸತೀಶ ಜಾರಕಿಹೊಳಿ !


ಬಾದಾಮಿ (ಬಾಗಲಕೋಟೆ ಜಿಲ್ಲೆ): ಮುಖ್ಯಮಂತ್ರಿಯಾಗುವ ಅವಕಾಶ ಎಲ್ಲ ಸಮುದಾಯದವರಿಗೂ ಬರುತ್ತದೆ. ಅದಕ್ಕೆ ಕಾಯಬೇಕು. ಮುಂದೆ ಅವಕಾಶ ಬಂದಾಗ ನೋಡೋಣ ಎಂದು ಮಾಜಿ ಸಚಿವ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ , ಸತೀಶ ಜಾರಕಿಹೊಳಿ ಯಾಕೆ ಸಿಎಂ ಆಗಬಾರದು ಎಂದು ನೀಡಿದ್ದ ಹೇಳಿಕೆಗೆ ಶಾಸಕರು ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ದೋಸ್ತಿ ಸರಕಾರ ಬಿದ್ದು ಹೋಗುತ್ತೆ ಎಂಬ ಜಗದೀಶ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸರಕಾರ ಬೀಳೋದಿಲ್ಲ. ಐದು ವರ್ಷವೂ ಅಧಿಕಾರ ನಡೆಸುತ್ತೆ. ಮಂತ್ರಿಮಂಡಳ ವಿಸ್ಗರಣೆಯಾದರೆ ಒಳ್ಳೆಯದೇ ಆಗುತ್ತೆ. ಕೆಟ್ಟದ್ದೇನೂ ಆಗುವುದಿಲ್ಲ ಎಂದರು.

ತಮಗೆ ಸಚಿವ ಸ್ಥಾನ ಕೊಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ದೆಹಲಿ ಮಟ್ಟದಲ್ಲಿ ನಿರ್ಧಾರವಾಗುತ್ತದೆ ಎಂದ ಅವರು ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

 

Leave a Reply

Your email address will not be published.