ರಮೇಶನನ್ನು ಹುಡುಕಾಡಿಯಾದರೂ ಮಾತಾಡ್ತೇನೆ ಅಂದ್ರು ಸತೀಶ ಜಾರಕಿಹೊಳಿ !!


ಬೆಳಗಾವಿ: ಮಂತ್ರಿ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿಯವರನ್ನು ಭೇಟಿ ಮಾಡುವುದಕ್ಕಾಗಿಯೇ ನೂತನ ಸಚಿವ ಸತೀಶ ಜಾರಕಿಹೊಳಿ ಇಂದು ಮಧ್ಯಾಹ್ನ ಗೋಕಾಕಕ್ಕೆ ತೆರಳಲಿದ್ದಾರೆ.

ಮಾಜಿ ಸಚಿವ ರಮೇಶ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿದ್ದು ಯಾರ ಕೈಗೂ ಸಿಗುತ್ತಿಲ್ಲ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಎಲ್ಲಿದ್ದರೂ ಹುಡುಕಿ ಮಾತುಕತೆ ನಡೆಸುತ್ತೇವೆ. ಮನವೊಲಿಸಲು ಶಕ್ತಿ ಮೀರಿ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಸಂಜೆ ವೇಳೆಗೆ ಅವರೊಂದಿಗೆ ಸಂಪರ್ಕ ಸಾಧಿಸುವ ವಿಶ್ವಾಸವನ್ನು ಸತೀಶ ಜಾರಕಿಹೊಳಿ ಹೊಂದಿದ್ದಾರೆ.

Leave a Reply

Your email address will not be published.