ನಿರಂತರ ಜನಸಂಪರ್ಕದಲ್ಲಿ ನೂತನ ಸಚಿವ ಸತೀಶ ಜಾರಕಿಹೊಳಿ:ಅಥಣಿಯಲ್ಲೂ ಅದ್ದೂರಿ ಸ್ವಾಗತ-VIDEO


ಅಥಣಿ: ದೋಸ್ತಿ ಸರ್ಕಾರದ ನೂತನ ಸಚಿವರಾಗಿ  ಅಹವಾಲು ಸ್ವೀಕರಿಸಲು ಇದೇ ಮೊದಲ ಬಾರಿಗೆ ಅಥಣಿಗೆ ಆಗಮಿಸಿದ ಸತೀಶ ಜಾರಕಿಹೊಳಿಗೆ ಸ್ವಾಗತ ಕೋರಲು ಜನಸಾಗರವೇ ಹರಿದು ಬಂದಿದೆ. 

ಸಂಪು ದರ್ಜೆ ಸಚಿವರಾಗಿ ಜಿಲ್ಲಾದ್ಯಂತ ಪ್ರವಾಸ ಕೈಗೊಂಡಿರುವ ಸಚಿವರು ಇಂದು ಇಲ್ಲಿನ ಐಬಿಯಲ್ಲಿ ಜನರ ಅಹವಾಲು ಸ್ವೀಕರಿಸಲು  ಬಂದಿದ್ದು ಹೂಗುಚ್ಛ ನೀಡಿ ಅವರನ್ನು ಅಭಿನಂದಿಸಲು ನೂರಾರು ಜನರು ಬಂದಿದ್ದರು.

ಸೆಲ್ಪಿ ತೆಗೆದುಕೊಂಡು ಖುಷಿಪಟ್ಟ ಅಭಿಮಾನಿಗಳು:

ಸಚಿವರಾಗಿ ಕೇವಲ ನಾಲ್ಕು ದಿನಗಳು ಕಳೆದಿದ್ದು   ನಿರಂತರವಾಗಿ ಜನಸಂಪರ್ಕ ಮಾಡುತ್ತಿರುವ  ಸಚಿವರ ಕಾರ್ಯವೈಖರಿ ಅವರ ಅಭಿಮಾನಿಗಳಿಗೆ ಸಂತಸ ತಂದಿದ್ದು ಅವರ ಜೊತೆ ಸೆಲ್ಪಿ ತೆಗೆದುಕೊಂಡು ಖುಷಿಪಡುತ್ತಿದ್ದಾರೆ. 

Leave a Reply

Your email address will not be published.