ಹೊಟ್ಟೆನೋವು ತಾಳದೆ ವ್ಯಕ್ತಿ ಆತ್ಮಹತ್ಯೆ


ಮಧುಗಿರಿ: ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ  ವ್ಯಕ್ತಿಯೊಬ್ಬ ಮನನೊಂದು  ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ದೊಡ್ಡಪೇಟೆಯ ನಿವಾಸಿ ಹರ್ಷಕುಮಾರ್(40)  ನೇಣಿಗೆ ಶರಣಾದವ.ಕಳೆದ ಕೆಲವು ದಿನಗಳಿಂದ ಹರರಷಕುಮಾರ್ ನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಖಿನ್ನತೆಗೆ ಒಳಗಾಗಿ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಧುಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿ.ಎಸ್.ಐ. ರವೀಂದ್ರ ತಿಳಿಸಿದ್ದಾರೆ.

Leave a Reply

Your email address will not be published.