ಭತ್ತದ ಹುಲ್ಲಿನ ಬಣವೆಗೆ ಬೆಂಕಿ : ಹುಲ್ಲು ಭಸ್ಮ


ಸುರಪುರ: ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ರೈತನೊಬ್ಬನ ಜಮಿನನಲ್ಲಿಯ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸಾವಿರಾರು ರೂಪಾಯಿಗಳ ಹುಲ್ಲು ಸುಟ್ಟಿರುವ ಘಟನೆ ನಡೆದಿದೆ.
ಬಾದ್ಯಾಪುರ ಗ್ರಾಮದ ರೈತ ಸಣ್ಣ ಭೀಮಣ್ಣ ಅಂಟೋಳಿ ಎಂಬ ರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಹುಲ್ಲನ್ನು ಒಂದೆಡೆ ಕೂಡಿಹಾಕಿ,ಬೇಸಿಗೆ ಕಾಲದಲ್ಲಿ ತನ್ನ ಹತ್ತು ಜಾನುವಾರುಗಳ ಮೆಯಿಸಲು ಅನುಕೂಲವಾಗಲಿದೆ ಎಂದು ಕೂಡಿ ಹಾಕಿಕೊಂಡಿದ್ದನು.ರವಿವಾರ ಮದ್ಹ್ಯಾನದ ವೇಳೆಯಲ್ಲಿ ಆಕಸ್ಮಿಕವಾಗಿ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದ್ದು ಸಾವಿರಾರು ರೂಪಾಯಿಗಳ ಹುಲ್ಲು ಸುಟ್ಟು ಕರಕಲಾಗಿದೆ.ಬೆಂಕಿ ಹತ್ತಿದ್ದನ್ನು ನೋಡಿ ನಂತರ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದು,ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರಾದರೂ ಅರ್ಧಕ್ಕಿಂತ ಹೆಚ್ಚಿನ ಹುಲ್ಲು ಸುಟ್ಟಿದ್ದು ರೈತ ಭೀಮಣ್ಣ ಚಿಂತಾಕ್ರಾಂತನಾಗಿದ್ದಾನೆ.
ಬೆಸಿಗೆ ಬೆಳೆಯು ಇಲ್ಲ,ದನಗಳಿಗೆ ಮೆಯಿಸಲು ಅನುಕೂಲವಾಗಲಿದೆ ಎಂದು ಹುಲ್ಲು ಕೂಡಿ ಹಾಕಿಕೊಂಡಿದ್ದೆ,ಈಗ ಎಲ್ಲ ಹುಲ್ಲು ಸುಟ್ಟಿದ್ದು,ದನಗಳಿಗೆ ಮೇಯಿಸಲು ಬಾರದಂತಾಗಿದೆ.ಆದ್ದರಿಂದ ಸರಕಾರ ಹುಲ್ಲನ್ನು ಒದಗಿಸಬೇಕು ಎಂದು ರೈತ ಸರಕಾರಕ್ಕೆ ವಿನಂತಿಸಿದ್ದಾರೆ.

Leave a Reply

Your email address will not be published.