ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ


ಬಾಗಲಕೋಟ: ರೈಲು ಹಳಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರೈಲ್ವೆ ಗೇಟ್ ನಲ್ಲಿ ಇಂದು ನಡೆದಿದೆ.

ಬಾಗಲಕೋಟೆ ತಾಲೂಕಿನ ಗುಳಬಾಳ ತಾಂಡಾ ನಿವಾಸಿ ಪರಶು ರಾಠೋಡ್ (27) ಮೃತ ಯುವಕ.

ಟ್ರೇನ್ ಬರುತ್ತಿರೋದನ್ನ ಕಾಯ್ತಾ ಇದ್ದವ ದಿಢೀರನೇ ರೈಲು ಹಳಿ ಮೇಲೆ ಮಲಗಿದ್ದಾನೆ. ದೇಹ ಛಿದ್ರ ಛಿದ್ರವಾಗಿದ್ದು, ರುಂಡ ಮುಂಡ ಬೇರ್ಪಟ್ಟಿದೆ.

ಮೃತ ಪರಶು ಬಾಗಲಕೋಟೆ ಹೆಸ್ಕಾಮ್ ನಲ್ಲಿ ಲೈಮನ್ ಆಗಿ‌ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published.