ಸಿಂಧನೂರಿನಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು: ತಂದೆ, ಮಗ ಸ್ಥಳದಲ್ಲೇ ಸಾವು


ರಾಯಚೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಭಸವಾಗಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಮತ್ತು ಮಗ ಸ್ಥಳದಲ್ಲಿಯೇ ಸಾವನ್ನಪ್ಪದ್ದಾರೆ.

ಸಿಂಧನೂರಿನ ರಾಘವೇಂದ್ರ ರೈಸ್ ಮಿಲ್ ಬಳಿ ಶುಕ್ರವಾರ ಈ ಅಪಘಾತ ನಡೆದಿದೆ.

ಹನೀಫ್ ಕುರೇಸಿ (60) ಹಾಗೂ ಅಬ್ದುಲ್ಲಾ (16) ಮೃತರು. ಇನ್ನೂ ಕಾರಿನಲ್ಲಿದ್ದ ಅಖ್ತರಾಬಾನು(50) ಹಾಗೂ ಅಬ್ದುಲ್ ಲತೀಫ (36) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಸಿಂಧನೂರು ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ

Leave a Reply

Your email address will not be published.