ಹೊಸಹುದ್ದೆಗೂ ರಾಜೀನಾಮೆ ನೀಡಿದ ಸಿಬಿಐ ನಿರ್ದೇಶಕ ಅಲೋಕ ವರ್ಮಾ: ಕೇಂದ್ರ ವಿರುದ್ಧ ಕಿಡಿ


ಹೊಸದಿಲ್ಲಿ:  ಸಿಬಿಐ ನಿರ್ದೇಶಕ ಹುದ್ದೆಯಿಂದ  ಕೇಂದ್ರ ಸರ್ಕಾರ ವಜಾಗೊಳಿಸಿದ್ದ ಅಲೋಕ್​ ಕುಮಾರ್​ ವರ್ಮ​ ಅವರು ಮಹತ್ತರ ಬೆಳವಣಿಗೆಯೊಂದರಲ್ಲಿ ತಮ್ಮ ನೂತನ ಹುದ್ದೆ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. 

ಇದೇ ಜ.31ರಂದು ನಿವೃತ್ತರಾಗಲಿದ್ದ  ಸಿಬಿಐ ನಿರ್ದೇಶಕ ಅಲೋಕ ವರ್ಮಾ ಅವರನ್ನು ಕೇಂದ್ರ್ ಸರ್ಕಾರ ಬಲವಂತದ ರಜೆ ಮೇಲೆ ಕಳಿಸಿತ್ತು. ನಂತರ    ಸುಪ್ರೀಂ ಕೋರ್ಟ್ ಅಲೋಕ್  ವರ್ಮಾ ಅವರನ್ನು ಸಿಬಿಐ ಮುಖ್ಯಸ್ಥರಾಗಿ ಮರುನೇಮಕ ಮಾಡಿದ ಎರಡು ದಿನಗಳಲ್ಲೇ ಮತ್ತೆ ವಜಾಗೊಳಿಸಿ, ವರ್ಗಾವಣೆ ಮಾಡಲಾಗಿತ್ತು. 

ಸುಪ್ರೀಂ ನಿರ್ಣಯ ನಂತರವೂ ಕೂಡ ಅಲೋಕ ವರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ, ಅಗ್ನಿಶಾಮಕ ವಿಭಾಗದ ಡಿಜಿ ಹುದ್ದೆಗೆ ವರ್ಗಾಯಿಸಿತ್ತು.

 “ಪ್ರಜಾಪ್ರಭುತ್ವ ರಾಷ್ಟ್ರದಲ್ಲೆ ಸಿಬಿಐ ಮಹತ್ತರ ಸ್ಥಾನ ಹೊಂದಿದೆ. ಆದರೆ, ಕೇಂದ್ರ್ ಸರ್ಕಾರ ನಿನ್ನೆ ತೆಗೆದುಕೊಂಡಿರುವ ನಿರ್ಧಾರ ಕೇವಲ ನನ್ನ ಕಾರ್ಯವೈಖರಿಯ ಪ್ರತಿಬಿಂಬವಷ್ಟೇ ಅಲ್ಲ, ಸಿಬಿಐ ಅನ್ನು ಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನೂ ತೋರಿಸುತ್ತದೆ ಎಂದು ವರ್ಮಾ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ

Leave a Reply

Your email address will not be published.