ಪಿಎಸ್ ಐ ಎಂದು ನಂಬಿಸಿ ಹಣ ಕೀಳುತ್ತಿದ್ದವನ ಬಂಧನ


ಮೈಸೂರು: ಪಿಎಸ್ ಐ ಎಂದು ನಂಬಿಸಿ ಜನರಿಂದ ಹಣ ಕೀಳಲು ಯತ್ನಿಸುತ್ತಿದ್ದ ಹುಬ್ಬಳ್ಳಿ ಮೂಲದ ಯುವಕನೊಬ್ಬನನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಸಿದ್ದಪ್ಪ (27) ಎಂದು ಗುರುತಿಸಲಾಗಿದೆ.

ನಾರಾಯಣಗೌಡ ಎಂಬುವವರನ್ನು ಸಂಪರ್ಕಿಸಿದ್ದ ಸಿದ್ದಪ್ಪ, ತಾನು ಪಿಎಸ್ ಐ ಆಗಿದ್ದು, ನಿಮ್ಮ ಮಗ ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ವಂಚಿಸಿದ್ದಾನೆ. ಪ್ರಕರಣ ಮುಚ್ಚಿ ಹಾಕಲು 50 ಸಾವಿರ ರೂ. ನೀಡಬೇಕಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದ. ಇದರಿಂದ ಬೆದರಿದ ನಾರಾಯಣಗೌಡ 5 ಸಾವಿರ ರೂ. ಗಳನ್ನು ಆರೋಪಿಗೆ ನೀಡಿ, 45 ಸಾವಿರ ರೂ. ಗಳನ್ನು ಬ್ಯಾಂಕಿನಿಂದ ತೆಗೆದುಕೊಡುವುದಾಗಿ ಹೇಳಿದ್ದರು.

ನಂತರ ಆತನ ವರ್ತನೆಯ ಮೇಲೆ ಅನುಮಾನಗೊಂಡು ಉದಯಗಿರಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published.