ನಾಳೆಯಿಂದ ಸಂಗೊಳ್ಳಿ ರಾಯಣ್ಣ ಉತ್ಸವ, ಚನ್ನಮ್ಮ ವೃತ್ತಕ್ಕಿಲ್ಲ ಅಲಂಕಾರ


ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಅಧಿಕಾರಿಗಳು

ಬೆರಳನಿಕೆ ಅಧಿಕಾರಿಗಳಿಂದ ರಾಯಣ್ಣ ಜ್ಯೋತಿ ಯಾತ್ರೆ ಸ್ವಾಗತ

ಬೈಲಹೊಂಗಲ:  ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಮೂರ್ತಿಯ ವೃತ್ತದಲ್ಲಿ ವಿದ್ಯುತ್ತ ದೀಪಗಳಿಲ್ಲದೆ ಕತ್ತಲೆ ಮುಳುಗಿದ್ದು, ಗುರುವಾರ ರಾತ್ರಿ ಆಗಮಿಸಿದ ರಾಯಣ್ಣನ ಜ್ಯೋತಿ ಯಾತ್ರೆಗೆ ಬೆರಳನಿಕೆಯ ಅಧಿಕಾರಿಗಳಿಂದ ಸ್ವಾಗತಿಸಿದ ಘಟಣೆ ನಡೆದು ಅಗೌರವ ತೋರರಲಾಗಿದೆ.

ಚನ್ನಮ್ಮನ ಮೂರ್ತಿ ಸ್ಥಾಪನೆಯಾಗಿ ಒಂದು ವರ್ಷ ಕಳೆಯುತ್ತ ಬಂದರೂ ಮೂರ್ತಿ ಕತ್ತಲೆಯಲ್ಲಿಯೇ ಮುಳುಗಿದ್ದು ಅದೇ ಸ್ಥಳದಲ್ಲಿ ಜ್ಯೋತಿ ಸ್ವಾಗತಿಸುವ ಪರಿಪಾಠವಿದೆ. ತಾಲೂಕಾ ಆಡಳಿತ ಕತ್ತಲೆಯಲ್ಲಿಯೇ ಜ್ಯೋತಿ ಸ್ವಾಗತಿಸಿದ್ದರಿಂದ ಚನ್ನಮ್ಮನ, ರಾಯಣ್ಣನ ಅಭಿಮಾನಿಗಳು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೃತ್ತಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೆ ಹಾಗೆ ಬಿಡಲಾಗಿದೆ. ಉಪವಿಭಾಗಾಧಿಕಾರಿ, ಪುರಸಭೆ ಆಡಳಿತ ಅಧಿಕಾರಿ ಶಿವಾನಂದ ಭಜಂತ್ರಿ, ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರಾಯಣ್ಣ ಸ್ಮರಣೋತ್ಸವ ಸಮೀತಿ ಅಧ್ಯಕ್ಷ ರಾಜು ಸೊಗಲ ಆಕ್ರೋಶ ವ್ಯಕ್ತಪಡಿಸಿದರು.

ವೃತ್ತ ಉದ್ಘಾಟನೆಗೊಂಡ ವರ್ಷದಲ್ಲಿ ಟೈಲ್ಸ್ ಕಲ್ಲು ಬಿರುಕು ಬಿಟ್ಟಿವೆ. ಚನ್ನಮ್ಮನಿಗೆ ನಮನ ಸಲ್ಲಿಸಲು ಹೋಗುವ ಸ್ಟೀಲ್ ಏಣಿಯ ಮೆಟ್ಟಿಲುಗಳನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ಇದರಿಂದ ಧಾರವಾಡ ಭಾಗದಿಂದ ಬರುವ ಪ್ರಯಾಣಿಕರಿಗೆ ಚನ್ನಮ್ಮನ ಮೂರ್ತಿ ಕಾಣದಾಗಿದೆ. ಕೂಡಲೇ ಸ್ಟೀಲ್ ಏಣಿಯ ಮೆಟ್ಟಿಲುಗಳನ್ನು ತೆರುವುಗೊಳಿಸಿ ಚನ್ನಮ್ಮನ ಮೂರ್ತಿ ಸ್ಪಷ್ಟವಾಗಿ ಕಾಣುವಂತೆ ಮಾಡಬೇಕೆಂದು ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಒತ್ತಾಯಿಸಿದ್ದಾರೆ.

ವಾದ್ಯ ಮೇಳವಿಲ್ಲದೆ ಜ್ಯೋತಿ ಬಿಳ್ಕೋಡುಗೆ:  ಚನ್ನಮ್ಮನ ಸಮಾಧಿ ಸ್ಥಳದಿಂದ ಬಿಳ್ಕೋಡೆಗೆಯಾದ ರಾಯಣ್ಣನ ಜ್ಯೋತಿ ಯಾತ್ರೆಗೆ ಬೆರಳೆಣಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು. ಯಾವುದೇ ವಾದ್ಯ ಮೇಳವಿಲ್ಲದೆ ಮೌನವಾಗಿ ಜ್ಯೋತಿ ಬಿಳ್ಕೋಟ್ಟಿದ್ದು ವೀರರ ಕುರಿತಾದ ನಿರ್ಲಕ್ಷ ಎತ್ತಿ ತೊರಿಸಿತು.

ಚನ್ನಮ್ಮನ ಸಮಾಧಿ ರಸ್ತೆ, ಸುತ್ತಮುತ್ತ ಕಸದರಾಶಿ ತುಂಬಿತ್ತು. ಜ್ಯೋತಿ ಯಾತ್ರೆಗೆ ಯಾವುದೇ ಅದ್ಧೂರಿ ಬಿಳ್ಕೋಡುಗೆ ಮಾಡಲಿಲ್ಲ. ಕೇವಲ ಗಣಾಚಾರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಕರೆಯಿಸಿ ಮೆರವಣಿಗೆ ಮೂಲಕ ರಾಯಣ್ಣನ ಜ್ಯೋತಿಯನ್ನು ಬಿಳ್ಕೋಡಲಾಯಿತು. ಇದನ್ನು ಕಂಡ ಸಾರ್ವಜನಿಕರು ಆಡಳಿತ ವಿರುದ್ಧ ಬೇಸರಗೊಂಡರು.

ಜ್ಯೋತಿ ಯಾತ್ರಗೆ ಹಾಗೂ ಚನ್ನಮ್ಮ ಸಮಾಧಿಗೆ ಗೌರವ ಸಮರ್ಪಿಸಿ ತಹಶೀಲ್ದಾರ ಪ್ರಕಾಶ ಗಾಯಕವಾಡ, ಬಿಳ್ಕೊಟ್ಟರು. ಬಗಳಾಂಬಾದೇವಿ ದೇವಸ್ಥಾನದ ವೀರಯ್ಯಸ್ವಾಮಿ, ಯುವ ಮುಖಂಡ ಬಸವರಾಜ ಕೌಜಲಗಿ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಕಂದಾಯ ನಿರೀಕ್ಷಕ ಐ.ಕೆ.ಕುಂದುನಾಯ್ಕ, ಸಿಡಿಪಿಒ ಸುಖಸಾರಿ, ಪಿಡ್ಲೂಡಿ ಎಇಇ ಎಂ.ಬಿ.ಗಣಾಚಾರಿ, ಎಸ್.ಪಿ.ಮತ್ತಿಕೊಪ್ಪ, ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಪಿಎಸ್‍ಐ ಎಂ.ಎಸ್. ಹೂಗಾರ, ತಾಪಂ ಸಹಾಯಕ ನಿದೇರ್ಶಕ ಎಸ್.ಎಸ್.ಸಂಪಗಾಂವ, ನೀರಾವರಿ ಇಲಾಖೆ ಎಇಇ ಆರ್.ಜಿ.ಯಲಿಗಾರ, ಉಪನ್ಯಾಸಕ ಎಂ.ಎಸ್.ಪೆಂಟೇದ, ಜೆ.ಆರ್.ಪತ್ತಾರ, ಗುರು ಮಲ್ಲೂರ, ಮನೋಹರ ಬೊಂಗಾಳೆ, ವಿದ್ಯಾರ್ಥಿನಿಯರು, ಅಂಗನವಾಡಿ ಕಾರ್ಯಕರ್ತರು ಇದ್ದರು.

Leave a Reply

Your email address will not be published.