ಕ್ಲರ್ಕ್ ಹೇಳಿಕೆ: ಸಾಲಮನ್ನಾ ನಂತರ ಎರಡನೇ ಸುಳ್ಳು ಅಪಾದನೆ ಮಾಡಿದ ಪ್ರಧಾನಿ ಮೋದಿ: ಸಿಎಂ ಕುಮಾರಸ್ವಾಮಿ


ಬೆಂಗಳೂರು: ಪ್ರಧಾನಿ ಮೋದಿ ಕ್ಲರ್ಕ್ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. 

ಇಂದು ರಾಮಲೀಲಾ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಸಿಎಂ ಕುಮಾರಸ್ವಾಮಿರನ್ನು ಕ್ಲರ್ಕ್ ಎಂದು ಟೀಕಿಸಿದ್ದರು. ಈ ಕುರಿತು ತಮ್ಮ್ ಟ್ವೀಟ್ಟರ್ ಖಾತೆ ಮೂಲಕ ಅಸಮಾಧಾನ ಹೊರಹಾಕಿದ ಸಿಎಂ ಪ್ರಧಾನಿ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ. 

ಪ್ರಧಾನಿ ಮೋದಿ ನಾನೂ ಎಂದಿಗೂ ನೀಡದ ಹೇಳಿಕೆಗೆ ಪ್ರತಿಕ್ರಿಯಿದ್ದು ಅಚ್ಚರಿ ಮೂಡಿಸಿದೆ. ಸಾಲಮನ್ನಾ ನಂತರ ಇದು ಎರಡನೇ ಸುಳ್ಳು ಅಪಾದನೆಯನ್ನು ಪ್ರಧಾನಿ ಮೋದಿ ನನ್ನ ಮೇಲೆ  ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. 

ಈ ತರಹದ ಸುಳ್ಳು ಹೇಳಿಕೆಗಳು ದೋಸ್ತಿ ಸರ್ಕಾರವನ್ನು ಅಸ್ತಿರಗೊಳಿಸಲು ಸಾಧ್ಯವಿಲ್ಲ. ಅಬಿವೃದ್ಧಿಯೇ ನಮ್ಮ ದೈಯ ಎಂದು ಹೇಳಿದ್ದಾರೆ. 

Leave a Reply

Your email address will not be published.