ಮರಳು ದಂಧೆಯಲ್ಲಿ ಶಾಸಕರ ಬೆಂಬಲಿಗರು ಭಾಗಿ:ಮಾಜಿ ಶಾಸಕ ಆರ್.ವಿ.ನಾಯಕ ಆರೋಪ 


ಸುರಪುರ: ಕಳೆದ ಕೆಲ ದಿನಗಳ ಹಿಂದೆ ಶಾಸಕ ರಾಜುಗೌಡ, ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯಲ್ಲಿ ಮಾಜಿ ಶಾಸಕರು ಭಾಗಿಯಾಗಿದ್ದಾರೆಂದು ಆರೋಪಿಸಿದ್ದು,ಇದು ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸ್ಪಷ್ಟನೆ ನೀಡಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ‌ ಅವರು,  ಶಾಸಕ ರಾಜುಗೌಡರ ಬೆಂಬಲಿಗರೇ ಭಾಗಿಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ ತಮ್ಮವರೇ ಅಕ್ರಮ ಮರಳು ದಂಧೆ ನಡೆಸುತ್ತಿರುವಾಗ ನನ್ನ ಹೆಸರು ಹೇಳಿದ್ದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ತಾವೇ ಶಾಸಕರಿದ್ದು ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ವಿಫಲರಾಗಿದ್ದು, ಅಲ್ಲದೇ ಬೇಸಿಗೆ ಬೆಳೆಗಾಗಿ ರೈತರು ಬೆಳೆದ ಶೇಂಗಾ ಮತ್ತಿತರೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಇದರ ಬಗ್ಗೆ ಮೊದಲು ಗಮನ ಹರಿಸಿ ರೈತರ ನೆರವಿಗೆ ನಿಲ್ಲುವಂತೆ ಆಗ್ರಹಿಸಿದರು.

ಹಿಂದೆ ನಾನು ಶಾಸಕನಾಗಿದ್ದಾಗ ರೈತರಿಗೆ ವರ್ಷಕ್ಕೆ ಎರಡು ಬೆಳೆಗೆ ನೀರು ಬಿಡಿಸಿದ್ದೆ. ಆದರೆ ಈಗ ರೈತರಿಗೆ ನೀರು ಕೊಡುವಲ್ಲಿ ವಿಫಲರಾಗಿದ್ದಾರೆ ಎಂದರು.

ಇನ್ನು ಡಿ.ವಾಯ್.ಎಸ್ಪಿ ಶೀಲವಂತ ಹೊಸಮನಿ ವರ್ಗಾವಣೆಯಲ್ಲಿ ವಿನಾಕಾರಣ ನನ್ನ ಹೆಸರಿಸಿದ್ದಾರೆ.‌ ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂದರು.ಕಳೆದ ಐದಾರು ತಿಂಗಳಿಂದ ಕ್ಷೇತ್ರದಲ್ಲಿ ಹಲವಾರು ಕೊಲೆ, ಅತ್ಯಾಚಾರ, ಇಸ್ಪೀಟ್ ದಂಧೆ ಅಹ್ಯಾಹತವಾಗಿ ನಡೆದಿವೆ ಇದರ ಬಗ್ಗೆ ಗಮನ ಹರಿಸಲಿ, ಪೊಲೀಸ್ ಇಲಾಖೆ ಕೂಡ ಇಂತಹ ಪ್ರಕರಣಗಳ ಕಡಿವಾಣಕ್ಕೆ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Leave a Reply

Your email address will not be published.