ಹೊಸಕರೆ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿ ದೇವರಾಜು ಅವಿರೋಧ ಆಯ್ಕೆ


ಮಧುಗಿರಿ:  ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಪಂನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹೆಚ್. ಜಿ ದೇವರಾಜು,  ಉಪಾಧ್ಯಕ್ಷರಾಗಿ ಗಂಗಮ್ಮ ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಸಮುದಾಯದ ಸಾಮಾನ್ಯ, ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನ ಗಳಿಗೆ ಗುರುವಾರ ನಡೆದ  ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳು ಅವಿರೋಧವಾಗಿ ಆಯ್ಕೆಯಾದರು.
ತಹಸೀಲ್ದಾರ್,  ಚುನಾವಣಾಧಿಕಾರಿ ನಂದೀಶ್ ಮಾತನಾಡಿ , 2019 ಜ. 7 ರಿಂದ  ಅಧ್ಯಕ್ಷ ಸ್ಥಾನ ಹಾಗೂ 2018 ಡಿ. 18 ರಿಂದ  ಉಪಾಧ್ಯಕ್ಷ ಸ್ಥಾನ ಖಾಲಿಯಿದ್ದ ಹಿನ್ನೆಲೆ  ಎ. ಸಿ ರವರ ಆದೇಶ ಮೇರೆಗೆ ಚುನಾವಣೆ ನಡೆಸಲಾಗಿದೆ. ಯಾವೊಬ್ಬ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ  ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ   ಅವಿರೋಧವಾಗಿ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಪ್ರಕಟಿಸಿದರು.
ನೂತನ ಅಧ್ಯಕ್ಷ ಹೆಚ್ ಜಿ ದೇವರಾಜು ಮಾತನಾಡಿ,  ಅವಿರೋಧವಾಗಿ ನನ್ನನ್ನು ಸದಸ್ಯರು ಆಯ್ಕೆ ಮಾಡಿರುವುದಕ್ಕೆ ಅಬಾರಿಯಾಗಿದ್ದೇನೆ. ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿದ್ದು  ಹೆಚ್ಚು ಶುಚಿತ್ವದ ಕಡೆಗೆ ಗಮನ ಹರಿಸಲಾಗುವುದು  ಚುನಾವಣೆಯಲ್ಲಿ ನಾನು ಅಧ್ಯಕ್ಷರಾಗಲು ಸಹಕರಿಸಿದ ಮಾಜಿ ಶಾಸಕರಾದ ಕೆ. ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ ಹಾಗೂ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ರವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಗೋವಿಂದರಾಜು ಇ. ಚಿರಂಜೀವಿ. ಮೆಹಬೂಬ್ ಪಾಷ. ಬಿ ಪಿ ನಾಗರಾಜು. ಸಾವಿತ್ರಮ್ಮ . ಕಮಲಮ್ಮ. ಬೀಬಿಜಾನ್. ಕಮಲಮ್ಮ .ಜ್ಯೋತಿ.  ಹಾಗೂ ಕಾಂಗ್ರೆಸ್ ಮುಖಂಡರಾದ ಎನ್ ರಂಗಪ್ಪ. ಹೆಚ್ ವಿ ಮಂಜುನಾಥ್. ಹನುಮಂತರಾಯಪ್ಪ ಮತ್ತಿತರರು ಇದ್ದರು.

Leave a Reply

Your email address will not be published.