ಮೂಢನಂಬಿಕೆ ಧಿಕ್ಕರಿಸಿ, ವೈಚಾರಿಕತೆಯಿಂದ ಜೀವನ ನಡೆಸಿ: ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್


ಮಧುಗಿರಿ: ವೈಚಾರಿಕತೆಯಿಂದ ಜೀವನ ನಡೆಸಿದರೆ ಮೂಢನಂಬಿಕೆಗಳನ್ನು ಹೋಗಲಾಡಿಸ ಬಹುದು ಎಂದು ಪವಾಡ ರಹಸ್ಯ ಬಯಲು ತಜ್ಞ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹುಲಿಕಲ್ ನಟರಾಜ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ಎನ್.ಆರ್. ಸಭಾಂಗಣದಲ್ಲಿ ಏರ್ಪಡಿಸಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದುರ್ದೈವದ ಸಂಗತಿ ಏನೆಂದರೆ ವೈಜ್ಞಾನಿಕವಾಗಿ ಹಲವು ಸಂಶೋಧನೆಗಳು ನಡೆಸಿದರು ಕೂಡ, ನಮ್ಮ ಜನರು ಇನ್ನೂ ಕೂಡ ಮೂಢನಂಬಿಕೆಗಳ ಪರವಾಗಿಯೇ ನಿಂತಿದ್ದಾರೆ.  ಕೆಲವೊಂದು ವಿಧಿ ವಿಧಾನಗಳನ್ನು ಬಳಸಿಕೊಂಡು ಕೆಲವು ಡೋಂಗಿ  ಬಾಬಾಗಳು ಹಾಗೂ ಮೋಸ ಮಾಡುವವರು ಜನರನ್ನು ಮೂಢರನ್ನಾಗಿಸಿ ಹೀನ ಕೃತ್ಯಗಳನ್ನು ಮಾಡುತ್ತೀರುವುದು ಖಂಡನೀಯ ಇಂತಹ ಘಟನೆಗಳನ್ನು ತಡೆಯುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳ ಬೇಕೆಂದರು.

ಕಾರ್ಯಕ್ರಮದಲ್ಲಿ ಕಳ್ಳರು ಬಂಗಾರದ ಒಡವೆ ಕದಿಯುವ ವಿಧಾನ, ಡೊಂಗಿ ಸ್ವಾಮೀಜಿಗಳ ಮುಳ್ಳಿನ ಗದ್ದುಗೆಯ ಹಿಂದಿನ ರಹಸ್ಯ, ತೆಂಗಿನಕಾಯಿ ಕೈಯಲ್ಲಿ ಒಡೆಯುವುದರ ಬಗ್ಗೆ ಪುನರ್ ಜನ್ಮ ಹಾಗೂ ಹಲವು ಪವಾಡಗಳ ರಹಸ್ಯವನ್ನು ಬಿಚ್ಚಿಟ್ಟು ವಿದ್ಯಾರ್ಥಿಗಳಲ್ಲಿ ಮೂಡ ನಂಬಿಕೆಗಳ ವಿರುದ್ಧ ಅರಿವು ಮೂಡಿಸಿದರು.

ಪ್ರಾಂಶುಪಾಲ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪವಾಡಗಳನ್ನು ನಂಬದೆ ಅವುಗಳು ಯಾವ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು, ಅದರ ಹಿಂದಿನ ಮರ್ಮವನ್ನು ಇತರರಿಗೆ ಅರ್ಥ ಮಾಡಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಗೌತಮ ಬುದ್ಧ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಟಿ.ಗೋವಿಂದರಾಜು, ಪ್ರಾಧ್ಯಪಕರಾದ ದಿವಾಕರ, ಮಹಾಲಕ್ಷ್ಮೀ, ಬಾಳಪ್ಪ, ಪುಟ್ಟರಾಜು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published.