ಫೆ. 8 ರಿಂದ ಕುಂದಾನಗರಿಯಲ್ಲಿ ಐತಿಹಾಸಿಕ “ಕರ್ನಾಟಕ ಕುಸ್ತಿ ಹಬ್ಬ”


ಬೆಳಗಾವಿ: ಪ್ರಪ್ರಥಮ ಬಾರಿಗೆ ಐತಿಹಾಸಿಕ “ಕರ್ನಾಟಕ ಕುಸ್ತಿ ಹಬ್ಬ” ವನ್ನು  ಫೆಬ್ರುವರಿ 8 ರಿಂದ ಮೂರು ದಿನಗಳ ಕಾಲ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ  ಎಂದು ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಸವರಾಜ ಎಚ್  ತಿಳಿಸಿದರು.

ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಕ್ರೀಡಾಂಗಣದಲ್ಲಿ  ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ಕರ್ನಾಟಕ ಕುಸ್ತಿ ಹಬ್ಬ” ಯಶಸ್ವಿ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿಯ ಉಪ ನಿರ್ದೇಶಕರಾದ ಸೀಬಿರಂಗಯ್ಯ, ಅಂತರರಾಷ್ಟ್ರೀಯ ಕುಸ್ತಿಪಟು, ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷ ರತನ ಮಠಪತಿ, ಮುಕುಂದ ಕಿಲ್ಲೇಕರ (ಅರ್ಜುನ ಪ್ರಶಸ್ತಿ ವಿಜೇತ ಬಾಕ್ಸಿಂಗ್ ಕ್ರೀಡಾಪಟು), ಎಂ.ಆರ್. ಪಾಟೀಲ (ಒಲಂಪಿಯನ್) ಮಾಜಿ ಕುಸ್ತಿಪಟು, ಶಿವಾಜಿ ಚಿಂಗಳೆ (ಕಾಮನವೆಲ್ತ್ ಮೆಡಲಿಸ್ಟ್), ಮಹೇಶ ಡುಕ್ರೆ (ಅಂತರರಾಷ್ಟ್ರ ಕುಸ್ತಿಪಟು), ಹೆಸರಾಂತ ಕಬಡ್ಡಿ ಕ್ರೀಡಾಪಟು ಹಾಗೂ ಎ.ಸಿ.ಪಿ ಗ್ರಾಮೀಣರವರಾದ ಬಾಲಚಂದ್ರ ಬಿ.ಎಸ್, ಮಾಜಿ ಕುಸ್ತಿಪಟು ಮಹಾಂತೇಶ್ ಜಿದ್ದಿ (ಬೆಳಗಾವಿ ಕ್ರೈ ಎ.ಸಿ.ಪಿ) ಹಾಗೂ ಭಾರತೀಯ ಕ್ರೀಡಾ ಪ್ರಾಧೀಕಾರದ ಹಿರಿಯ ಕುಸ್ತಿ ತರಬೇತಿದಾರರಾದ ಶ್ರೀನಿವಾಸಗೌಡ, ಶಂಕರಪ್ಪ ಇತರರು ಇದ್ದರು.

Leave a Reply

Your email address will not be published.