ಕೆಜಿಎಫ್ ಬಳಿಕ ಮುಂಬೈಯಲ್ಲಿ ಅಬ್ಬರಿಸಿದ “ಕತ್ತಲುಕೋಣೆ” ಚಿತ್ರ..! ಪೇಕ್ಷಕರು ಫುಲ್ ಫೀದಾ


ಮುಂಬೈ: ಇತ್ತೀಚಿಗೆ ತೆರೆಗೆ ಕಂಡ ಕನ್ನಡದ ಕೆಜಿಎಫ್ ಚಲನಚಿತ್ರ ಹಿಂದಿ ಅವತರಣಿಕೆಯಲ್ಲಿ  ಹವಾ ಸೃಷ್ಟಿಸಿದ ಬೆನ್ನಲ್ಲೇ ಮತ್ತೊಂದು ಕನ್ನಡ ತುಳುಚಿತ್ರವೊಂದು ಮುಂಬೈನಲ್ಲಿ ಭರ್ಜರಿ ಪ್ರದರ್ಶನ ನಡೆಸುತ್ತಿದ್ದು, ಪ್ರೇಕ್ಷಕರು ಫುಲ್ ಫೀದಾ ಆಗಿದ್ದಾರೆ.

ಸಂದೇಶ ಶೆಟ್ಟಿ ಆಜ್ರಿ ಅಭಿನಯದ, ಮತ್ತು‌ ನಿರ್ದೇಶನ ಪುರುಷೋತ್ತಮ  ಅಮಿನ್ ನಿರ್ದೇಶಿರುವ ತಸಮೈಯ ಪ್ರೊಡಕ್ಸನ್ ರವರ “ಕತ್ತಲಕೋಣೆ” ಚಿತ್ರ ಪಕ್ಕದ ಮಾಯಾ ನಗರಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಡೀ ತುಳು ಕನ್ನಡಿಗರನ್ನು ನಿಬೆರಗಾಗಿಸಿದೆ.
ಈಗಾಗಲೇ ಕರ್ನಾಟಕದಲ್ಲಿ ಪ್ರದರ್ಶನ ಕಂಡು ಕರಾವಳಿ ಭಾಗದ ಜನರ ಮನಸ್ಸು  ಗೆದ್ದಿರುವ ಕತ್ತಲುಕೋಣೆ ಇಂದು ಮಾಯಾನಗರಿಯಲ್ಲಿ  ಮತ್ತೊಂದು  ದಾಖಲೆಯನ್ನೂ ತನ್ನ ಹೆಸರಿಗೆ ಬರೆಸಿಕೊಂಡಿದೆ.
ಮುಂಬೈ ನಗರದ ತುಳು ಕನ್ನಡದ ಜನರಲ್ಲಿ ಕನ್ನಡ ಬಾವುಟ ಹಾರಿದೆ. ಕತ್ತಲುಕೋಣೆ  ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಮಾನ್ಯವಾಗಿ ಸ್ಯಾಂಡಲವುಡನ ಮೇರು ನಟರ‌ ಚಿತ್ರಗಳು ಬೇರೆ ರಾಜ್ಯಗಳಲ್ಲಿ ತೆರೆ ಕಾಣುತ್ತದೆ. ಅದರಲ್ಲೂ ರಾಜಕುಮಾರ ಕುಟುಂಬದ ಚಿತ್ರಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಒಟ್ಟಾರೆಯಾಗಿ ಹೊಸ ಮುಖಗಳತ್ತ ಕನ್ನಡ ಚಿತ್ರದ ಬಗ್ಗೆ ಮುಬೈ ಕನ್ನಡಿಗರು ಮಾರು ಹೋಗಿದ್ದು ಇನ್ನಷ್ಟು ಮಾಡಬೇಕು ಆಲ ದ ಬೇಸ್ಟ ಎಂದು ಹೇಳುತ್ತಿದ್ದಾರೆ.
ಈಗ ಮಾಯಾನಗರಿಯಲ್ಲಿ ಕತ್ತಲುಕೋಣೆ ಹವಾ  ಕತ್ತಲುಕೋಣೆ‌ ಚಿತ್ರದ ಟ್ರೈಲರ್‌ ನೋಡಿಯೇ ಮುಬೈ ಕನ್ನಡ ಸಿನಿ ರಸಿಕರು ಫಿದಾ ಆಗಿದ್ದರು. ಅದರಲ್ಲಿ ಕೆಲವು ಅಭಿಮಾನಿಗಳು ನಮ್ಮ ರಾಜ್ಯದ ಚಿತ್ರ‌ ಎನ್ನುವ ಮೂಲಕ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು.
ಮೇರು ನಟರ ಚಿತ್ರದ ಮೇಕಿಂಗ್  ಕ್ಕಿಂತಲೂ ಸಖತ್‌ ಬೊಂಬಾಟಾಗಿದೆ. ಇದನ್ನು ನೋಡಲು ನಾವು ಉತ್ಸುಕರಾಗಿದ್ದೆವೆ  ಎಂದು ಅಲ್ಲಿನ ಕನ್ನಡಿಗರು ಹೇಳುತ್ತಾರೆ. ಈಗ ಪಕ್ಕದ ರಾಜ್ಯ ಮುಂಬೈ ನಗರದಲ್ಲಿ  ಕನ್ನಡ ಚಿತ್ರ ಗೆಲುವಿನ ನಾಗಾಲೋಟ ಮುಂದುವರಿಸಿದೆ.

Leave a Reply

Your email address will not be published.