ರಫೇಲ್ ಹಗರಣಕ್ಕೆ ಪ್ರಧಾನಿ ಮೋದಿಯೇ ನೇರ ಹೊಣೆ ಎಂದ್ರು ಮಲ್ಲಿಕಾರ್ಜುನ ಖರ್ಗೆ


ಕಲಬುರಗಿ: ರಫೇಲ್ ಹಗರಣಕ್ಕೆ ಪ್ರಧಾನಿ ಮೋದಿಯೇ ನೇರ ಹೊಣೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. 

 ನಗರದಲ್ಲಿ ಇಂದು ಮಾತನಾಡಿ 39,420 ಕೋಟಿ ರೂ. ಇದ್ದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು 62,166 ಕೋಟಿ ರೂ.ಗೆ ಹೆಚ್ಚಳ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು.

ರಫೆಲ್ ಹಗರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಹೊಣೆಗಾರರು. 36 ಯುದ್ಧ ವಿಮಾನ ಖರೀದಿಸುತ್ತೇವೆ ಎಂದು ಹೇಳಿ ಇದುವರೆಗೂ ಒಂದೇ ಒಂದು ವಿಮಾನ ಖರೀದಿಸಿಲ್ಲ ಎಂದರು.

ಬೊಫೋರ್ಸ್​ ಬಂದೂಕು ಹಿಡಿದು ಎಲ್ಲರನ್ನೂ ಮುಗಿಸುತ್ತೇವೆ ಅನ್ನೋದು ಕೇಂದ್ರ ಸರ್ಕಾರಕ್ಕೆ ಸಾಧ್ಯವಿಲ್ಲ. ಲೋಕಸಭೆಯಲ್ಲಿ ರಫೇಲ್​ ಕುರಿತ ನಮ್ಮ ಮೂಲ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದಿಂದ ಉತ್ತರವೇ ಸಿಕ್ಕಿಲ್ಲ ಎಂದರು.

ರಫೆಲ್  ಹಗರಣಕ್ಕೆ ಸಂಬಧಿಸಿದಂತೆ  ಜಂಟಿ ಸದನ ಸಮಿತಿ ರಚನೆಗೆ ಆಗ್ರಹಿಸಿ ಸದನದಲ್ಲಿ  ಹೋರಾಟ ಮುಂದುವರಿಸುತ್ತೇವೆ. ಸದನಕ್ಕೂ ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಗೌರವ ನೀಡುತ್ತಿಲ್ಲ ಎಂದರು.

Leave a Reply

Your email address will not be published.