3 ಖತರ್ನಾಕ ಕಳ್ಳರ ಬಂಧನ: 5.78 ಲಕ್ಷ ರೂ ಚಿನ್ನಾಭರಣ ವಶ


ಯಲಬುರ್ಗಾ, ಕುಕನೂರ, ಮತ್ತು ಬೇವೂರ ಠಾಣೆ ಪೊಲೀಸ್‌ರಿಗೆ ಬಹುಮಾನ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ, ಕುಕನೂರ ಹಾಗೂ ಕೊಪ್ಪಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ  6 ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೂವರು ಖದೀಮರನ್ನು ಬಂಧಿಸಿದ್ದಾರೆ.

ಭಾಗ್ಯನಗರ ನಿವಾಸಿ ಹನುಮಂತ ಕಾತರಗಿ(23), ವಿಜಯನಗರ ಬಡಾವಣೆ ಬಸವರಾಜ ಮಂಗಳೂರು(24) ಓಜಿನಹಳ್ಳಿ ರಮೇಶ ವಣಗೇರಿ(21) ಬಂಧಿತರು.

ಜಿಲ್ಲೆಯ ವಿವಿಧೆಡೆ ಸಂಚರಿಸುತ್ತಿದ್ದ ಖದೀಮರು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಬಂಧಿತರಿಂದ 5. 78 ಲಕ್ಷ ರೂ.  ಬೆಲೆಬಾಳು 227. 5 ಗ್ರಾಂ ಚಿನ್ನಾಭರಣ, 50 ಗ್ರಾಂ ಬೆಳ್ಳಿ, ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ರೇಣುಕಾ ಸುಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಡಿಎಸ್‌ಪಿ ಎಸ್.ಎಂ.ಸಂದಿಗವಾಡ ಮಾರ್ಗದರ್ಶನ ಹಾಗೂ ಸಿಪಿಐ ರಮೇಶ ರೊಟ್ಟಿ ನೇತೃತ್ವದಲ್ಲಿ ಪಿಎಸ್‌ಐ ರಾಘವೇಂದ್ರ, ಆಂಜನೇಯ, ಬಸವರಾಜ ಅವರ ಎರಡು ತಂಡಗಳು ಕಳ್ಳತನದ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಅವರಿಗೆ ಇಲಾಖೆಯಿಂದ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published.