ಶಿವಮೊಗ್ಗ ಲೋಕಸಭೆ ಚುನಾವಣೆ ಸ್ಪರ್ಧೆ ವಿಚಾರ: ದೇವೇಗೌಡ ನಿರ್ಣಯಕ್ಕೆ ಬದ್ಧ ಎಂದ್ರು ಮಧು ಬಂಗಾರಪ್ಪ


ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸುವ ವಿಚಾರವಾಗಿ ದೇವೇಗೌಡರ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿ   ಶಿವಮೊಗ್ಗದಲ್ಲಿ ನಾನು ಸೋತಿದ್ದರೂ ಬಿಜೆಪಿ ಅಧ್ಯಕ್ಷ  ಬಿಎಸ್​ವೈಗೆ ತೀವ್ರ ಪೈಪೊಟಿ ​ ನೀಡಿದ್ದೇನೆ.   ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ವಿಚಾರವಾಗಿ ದೇವೆಗೌಡರ ನಿರ್ಣಯಕ್ಕೆ ನಾನು ಬದ್ದನಿದ್ದೇನೆ ಎಂದ ಅವರು ಬಂಗಾರಪ್ಪ ಶಿವಮೊಗ್ಗ ಲೋಕಸಭೆ ಕ್ಷೇತ್ರದ  ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿದರು. 

ಜೆಡಿಎಸ್ ಪಕ್ಷದಲ್ಲಿ  ಸಂಸದೀಯ ಕಾರ್ಯದರ್ಶಿ ಅಥವಾ ರಾಜಕೀಯ ಕಾರ್ಯದರ್ಶಿ ಸೇರಿ ಯಾವ ಹುದ್ದೆಯ ಆಕಾಂಕ್ಷಿಯೂ ಅಲ್ಲ.  ಯಾವುದೇ ಜವಾಬ್ದಾರಿಯನ್ನು ನೀಡಿದರು ನಾನು ವಹಿಸಿಕೊಳ್ಳುತ್ತೇನೆ. ಆದರೆ, ನಾನಾಗೆ ಲಾಬಿ ಮಾಡುವುದಿಲ್ಲ. ಪಕ್ಷಕ್ಕೆ ಯಾವುದೇ ತ್ಯಾಗ ಮಾಡಲು ನಾವು ಸಿದ್ಧರಿದ್ದೇವೆ. ಆದಷ್ಟು ಶೀಘ್ರ ದೇವೇಗೌಡರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.

ಎಚ್​.ಡಿ.ಕುಮಾರಸ್ವಾಮಿ ಅವರು ಎರಡು ದೊಡ್ಡ ಸಂಸಾರ ನಡೆಸುತ್ತಿದ್ದಾರೆ. ಸರ್ಕಾರ ಹಾಗೂ ಪಕ್ಷವನ್ನೂ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಅವರಿಗೆ ನಾವು ತೊಂದರೆ ಕೊಡುವುದಿಲ್ಲ ಎಂದರು.

ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ದೇವೇಗೌಡರು ಸಾಕಷ್ಟು ಸಲಹೆ ನೀಡಿದ್ದಾರೆ. ಲೋಕಸಭೆ ಉಪ ಚುನಾವಣೆಯಲ್ಲಿ ವರಿಷ್ಠರ ತೀರ್ಮಾನದಿಂದ ಸ್ಪರ್ಧೆ ಮಾಡಿದ್ದೆ. ಆದರೆ, ಚುನಾವಣೆ ಬಳಿಕ ಪಕ್ಷದ ಚಟುವಟಿಕೆಯಿಂದ ಸ್ವಲ್ಪ ದೂರ ಇದ್ದೆ. ನನಗೆ ಯಾವುದೇ ಅಸಮಾಧಾನವಿಲ್ಲ. ನನಗೆ ಯಾವುದೇ ಸಿಟ್ಟಿಲ್ಲ. ವಿಶ್ವನಾಥ್ ಅವರು ನನ್ನ ಜತೆ ಮಾತನಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ವಿರುದ್ದ ಮಹಾಘಟಬಂಧನ ಅವಶ್ಯಕತೆವಿದ್ದು  ಉತ್ತರ ಪ್ರದೇಶದಲ್ಲಿ ಎಸ್‌.ಪಿ., ಬಿ.ಎಸ್‌.ಪಿ. ಹೊಂದಾಣಿಕೆಯಾಗುವಾಗ ಕಾಂಗ್ರೆಸ್‌ ಅನ್ನು ಹೊರಗಿಡಬಾರದಿತ್ತು. ಈ ಕುರಿತು ದೇವೇಗೌಡರು ವರಿಷ್ಠರ ಜೊತೆ ಮಾತನಾಡುತ್ತಾರೆ‌ ಎಂದು ಹೇಳಿದರು. 

Leave a Reply

Your email address will not be published.