ಫೆ. 1 ರಿಂದ ಮಧುಗಿರಿಯಲ್ಲಿ ನಂದಿನಿ ಹಾಲಿನ ದರ 1.5 ರೂ ಹೆಚ್ಚಳ: ಚಂದ್ರಶೇಖರ್ ಕೊಂಡವಾಡಿ


ಮಧುಗಿರಿ: ಫೆ.1 ರಿಂದ ನಂದಿನಿ ಹಾಲಿನ ದರವನ್ನು 1.5 ರೂಗಳಿಗೆ ಏರಿಕೆ ಮಾಡಲಾಗಿದೆ ಈಗ ನೀಡುತ್ತಿರುವ ಲೀ.ಒಂದಕ್ಕೆ 22 ರೂಗಳ ಬದಲಾಗಿ ಲೀ.ಗೆ 23.5 ರೂಗಳಿಗೆ ಹೆಚ್ಚಿಸಿರುವುದರಿಂದ ಹಾಲು ಉತ್ಪಾದಕರಿಗೆ ಅನೂಕೂಲವಾಗುವುದು ಎಂದು ತುಮಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ತುಮುಲ್ ಕಚೇರಿಯಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಸಭೆಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ವಿತರಣೆ ಹಾಗೂ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ನಂದಿನ ಹಾಲಿನ ದರವು ಈಗ ಲೀ. 22 ರೂ ಗಳಿದ್ದು ಫೆ.1 ರಿಂದ ಲೀ.23.5 ರೂ ಗಳಿಗೆ ಹೆಚ್ಚಿಸಲಾಗುತ್ತಿದ್ದು ಈಗ ಸರಕಾರ ನೀಡುತ್ತಿರುವ ಪ್ರೋತ್ಸಾಹ ಧನವು ಸೇರಿದಂತೆ 28.5 ರೂ ಗಳು ಉತ್ಪಾದಕರಿಗೆ ದೊರೆಯಲಿದೆ. ತಾಲೂಕಿನಲ್ಲಿ 156 ಹಾಲು ಉತ್ಪಾದಕರ ಸಂಘಗಳಿದ್ದು ಸುಮಾರು 8100 ರಾಸುಗಳಿಗೆ ವಿಮೆಗೆ ನೊಂದಾಯಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದೆವೆ.

ಕಳೆದ ಎರಡು ವರ್ಷಗಳಿಂದ ಸರಕಾರದ ವತಿಯಿಂದ ಯಾವುದೇ ರೀತಿಯ ವಿಮಾ ಹಣ ಮಂಜೂರು ಮಾಡಿಲ್ಲ. ನಮ್ಮ ತುಮುಲ್ ವತಿಯಿಂದ ವಿಮಾ ಹಣವನ್ನು ಪಾವತಿಸಲಾಗುತ್ತಿದೆ ರಾಸುಗಳಿಗೆ ವಿಮೆ ಮಾಡಿಸುವುದರಿಂದ ಹೆಚ್ಚಿನ ಅನೂಕೂಲವಾಗಲಿದೆ. ಬೇಸಿಗೆ ಸಮೀಪ ವಾಗುತ್ತಿರುವುದರಿಂದ ಹಾಲು ಉತ್ಪಾದಕರು ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು ಹಾಗೂ ರೈತರು ತಮ್ಮ ರಾಸುಗಳಿಗೆ ಕಾಲು ಬಾಯಿ ಜ್ವರದ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸುವಂತೆ ಸಲಹೆ ನೀಡಿದರು.

ಇದೇ ಸಂಧರ್ಭದಲ್ಲಿ ತುಮುಲ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ , ಬೆಂಕಿಗೆ ಆಹುತಿಯಾದ ಬಣವೆಗಳಿಗೆ ಪರಿಹಾರಧನ, ಮರಣ ಹೊಂದಿದ ರಾಸುಗಳಿಗೆ ಪರಿಹಾರ ಧನದ ಚೆಕ್‍ಗಳನ್ನು ಫಲಾನುಭವಿಗಳಿಗೆ ಕೊಂಡವಾಡಿ ಚಂದ್ರಶೇಖರ್ ವಿತರಿಸಿದರು.

ಲಿಂಗೈಕ್ಯರಾದ ಡಾ.ಶಿವಕುಮಾರ ಸ್ವಾಮೀಜಿಗಳ ಗೌರವಾರ್ಥ ಸಭೆಯಲ್ಲಿ ಮೌನಚರಣೆಯನ್ನು ಆಚರಿಸಲಾಯಿತು.

ಸಭೆಯಲ್ಲಿ ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ದಿಲೀಪ್, ಪಶುಪಾಲನೆ ಮತ್ತು ಪಶು ವೈದ್ಯಸೇವಾ ಇಲಾಖೆಯ ಸಹಾಯಕ ನಿರ್ದೇಶಕ ನಾಗಭೂಷಣ್ ವೈದ್ಯರಾದ ದೀಕ್ಷಿತ್ ಹಾಗೂ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತಿತರರು ಇದ್ದರು.

Leave a Reply

Your email address will not be published.