ಗೃಹಿಣಿ ಸಾವು: ಮಹಿಳೆಯ ಕುಟುಂಬಸ್ಥರಿಂದ ಪತಿಯ ಮೇಲೆ ಕೊಲೆ ಆರೋಪ


ಮಧುಗಿರಿ:ಪತ್ನಿಯನ್ನು ಪತಿಯೇ ಕುತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆಂದು ಆರೋಪಿಸಿ ಪತಿಯ ಮನೆಯ ಮುಂದೆ ಮೃತ ಮಹಿಳೆಯ ಕುಟುಂಬಸ್ಥರು ನ್ಯಾಯ ದೊರಕಿಸಿ ಕೊಡುವಂತೆ ಪೋಲೀಸರನ್ನು ಒತ್ತಾಯಿಸಿದರು.

ಪಟ್ಟಣದ ದೊಡ್ಡಪೇಟೆಯ ವಾಸಿ ಜಮೀರ್ ಸಿರಾ ಪಟ್ಟಣದ ವಾಸಿ ಜಿಲಾನಿ ಬಾನು (28) ಳ ಜೊತೆ 9 ವರ್ಷಗಳ ಹಿಂದೆಯೆ ವಿವಾಹವಾಗಿದ್ದ. ಆಗಾಗ ಇಬ್ಬರ ನಡುವೆ ಗಲಾಟೆ ನಡೆದು ಹಣ ತರುವಂತೆ ಪತಿ ಮತ್ತು ಆತನ ಕುಟುಂಬದವರು ಒತ್ತಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಮೂರು ದಿನಗಳ ಹಿಂದಯಷ್ಟೆ ತನ್ನ ತವರು ಮನೆ ಸೇರಿದ್ದ ಜಿಲಾನಿಬಾನುಳ ಕುಟುಂಬದವರು ಗಂಡ ಹೆಂಡತಿಯ ನಡುವೆ ರಾಜಿ ಪಂಚಾಯಾತಿ ನಡೆಸಿ ಮಧುಗಿರಿಯ ಗಂಡನ ಮನೆಗೆ ವಾಪಸ್ಸು ಕಳುಹಿಸಿದ್ದರು.

ಶನಿವಾರ ಪಟ್ಟಣದ ದೊಡ್ಡಪೇಟೆಯ ಪತಿಯ ಮನೆಯಲ್ಲಿಯೇ ಗಂಡನೆ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆಮಾಡಲಾಗಿದೆ ಎಂದು ಮೃತ ಮಹಿಳೆಯ ಕುಟುಂಬದವರಿಂದ ಆರೋಪ ಕೇಳಿಬರುತ್ತಿದೆ.

ಪತಿ ಜಮೀರ್ ನನ್ನು ವಶಕ್ಕೆ ಪಡೆದುಕೊಂಡು ಮಧುಗಿರಿ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published.