ದೋಸ್ತಿ ಸರಕಾರ ಅಂದ್ರೆ “ಎಲ್ ಒಸಿ ಇದ್ದಂಗ” ಸದಾ ಅಲರ್ಟ್ ಆಗಿರಬೇಕು: ಸಚಿವ ಸತೀಶ ಜಾರಕಿಹೊಳಿ


ಬೆಳಗಾವಿ:  ಆಪರೇಷನ್ ಕಮಲ ಇನ್ನು ಮೂರು ವರ್ಷ ನಾಲ್ಕು ತಿಂಗಳು  ನಡೆಯುತ್ತಲೇ ಇರುತ್ತದೆ ದೋಸ್ತಿ ಸರಕಾರ ಅಂದ್ರೆ (ಎಲ್ ಓಸಿ) ಗಡಿ ನಿಯಂತ್ರಣ ರೇಖೆಯಿದ್ದಂತೆ ಸದಾ ಅಲರ್ಟ್ ಆಗಿರಬೇಕು. ಹಾಗೇ ಅಲರ್ಟ್ ಆಗಿ ಐದು ವರ್ಷ ದೋಸ್ತಿ ಸರಕಾರ ಪೂರ್ಣಗೊಳಿಸುತ್ತೇವೆ ಅಂತಾ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ  70 ನೇ ಗಣರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ದೋಸ್ತಿ ಸರಕಾರ  ಟೇಕಪ್ ಆಗಿದ್ದು, ಎಲ್ಲರಲ್ಲಿ ಹೊಂದಾಣಿಕೆಯಾಗಿದೆ. ಯಾವುದೇ ತೊಂದರೆ ಇಲ್ಲ ಎಂದರು.

ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಪ್ರಣವ ಮುಖರ್ಜಿಯವರು ಒಬ್ಬ ಉತ್ತಮ ರಾಜಕಾರಣಿ ಹಾಗೂ ಎಕನಾಮಿಕ್ ಐಕಾನ್ ಇದ್ದಂತೆ  ಕೇಂದ್ರ ಸರಕಾರ ಅವರಿಗೆ ಭಾರತ ರತ್ನ ನೀಡಿರುವುದು ಒಳ್ಳೆಯ ವಿಚಾರ.  ಪ್ರತಿವರ್ಷ ಸರಕಾರ ಭಾರತ ರತ್ನ ಪ್ರಕಟಿಸುತ್ತದೆ. ಈ ಮೊದಲೇ ಪುರಸ್ಕೃತರ ಹೆಸರು ಅಂತಿಮಗೊಳಿಸಿರಬಹುದು ಹೀಗಾಗಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಿಲ್ಲ. ಮುಂದಿನ ವರ್ಷ ನೀಡಬಹುದು ಕಾದು ನೋಡೋಣ ಎಂದರು.

Leave a Reply

Your email address will not be published.