ಸಿದ್ದರಾಮಯ್ಯ ಈ ಕಾಲದ ಧರ್ಮರಾಜ, ಅವರು ಮತ್ತೊಮ್ಮೆ ಸಿಎಂ ಆಗೋದನ್ನು ತಪ್ಪಿಸೋಕಾಗೊಲ್ಲ ಅಂದೋರು ಯಾರು?: Video


ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಮಹಾಭಾರತದ ಧರ್ಮರಾಜನಿದ್ದಂತೆ . ಅವರು ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ ಹೇಳಿದ್ದಾರೆ.

ನಗರದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸುಧಾಕರ ವೇದಿಕೆಯಲ್ಲಿದ್ದ  ಸಿದ್ದರಾಮಯ್ಯ ಅವರನ್ನು  ಹಾಡಿ ಹೊಗಳಿದರು.

ದೂರು ನೀಡುವುದು , ಅಪಪ್ರಚಾರ ನಡೆಸುವುದು ರಾಜಕೀಯದಲ್ಲಿ ಸರ್ವೇ ಸಾಮನ್ಯ.  ಇದು ನಮ್ಮ ಸಮಾಜದಲ್ಲಿ ಹೊಸದೇನೂ ಅಲ್ಲ, ಮಹಾಭಾರತ ಕಾಲದಿಂದಲೂ ಇದು ನಡೆದು ಬಂದಿದೆ. ಇಡೀ ಮಹಾಭಾರತವೇ ಮೋಸದಿಂದ ಕೂಡಿದೆ.

ಆ ಮಹಾಭಾರತದಲ್ಲಿ ಧರ್ಮರಾಜನನ್ನು ಸೋಲಿಸಲು ಷಡ್ಯಂತ್ರ ನಡೆಸಲಾಯಿತು. ಆ ಷಡ್ಯಂತ್ರ ಮಾಡಿದವನೇ ಶಕುನಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ಈ ಧರ್ಮರಾಜ ( ಸಿದ್ದರಾಮಯ್ಯ) ನನ್ನು ಸೋಲಿಸಲೂ ಷಡ್ಯಂತ್ರ ನಡೆಯಿತು. ಅದು ಧರ್ಮದಿಂದ ಗೆದ್ದಿದ್ದು ಅಲ್ಲ, ಅಧರ್ಮದ ಜಯ. ಹೀಗಾಗಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವುದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಸುಧಾಕರ ಘಂಟಾಘೋಷವಾಗಿ ಹೇಳಿದರು.

Leave a Reply

Your email address will not be published.