ವೈರಲ್ ಆದ ಮೋದಿ-ರಾಹುಲ ವಿಡಿಯೋ: ಕಾಂಗ್ರೆಸ್ ಅಧ್ಯಕ್ಷರ ನಡೆಗೆ ನೆಟ್ಟಿಗರು ಫುಲ್ ಫಿದಾ


ಭುವನೇಶ್ವರ: ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಮತ್ತು ಪ್ರಧಾನಿ ಮೋದಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ರಾಹುಲ ಗಾಂಧಿ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. 

ಇಂದು  ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಭುವನೇಶ್ವರದ ಏರ್​ಪೋರ್ಟ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ  ಇಬ್ಬರು ಫೋಟೋಗ್ರಾಫರ್ಸ್​ ಆಕಸ್ಮಿಕವಾಗಿ ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದಾರೆ. ಅದನ್ನು ನೋಡಿದ ರಾಹುಲ್​ ತಕ್ಷಣ ಮೆಟ್ಟಿಲಿಳಿದು ಬಂದು ಬಿದ್ದವರನ್ನು ಮೇಲೆ ಎತ್ತಿದರು. ಪಲ್ಟಿಯಾಗಿ ಪೂರ್ತಿ ಕೆಳಕ್ಕೆ ಬಿದ್ದ ಒಬ್ಬ ಪೋಟೊಗ್ರಾಫರ್   ನೋಡಿದ ರಾಹುಲ್​ ಗಾಂಧಿ  ಕೈಹಿಡಿದು ಎತ್ತಿರುವ ವಿಡಿಯೋ ವೈರಲ್ ಆಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ  ಹರಿದಾಡುತ್ತಿದ್ದು ಕಾಂಗ್ರೆಸ್​ ಸದಸ್ಯೆ ಹಸಿಬಾ ಶೇರ್​ ಮಾಡಿದ್ದಾರೆ. ಅಲ್ಲದೆ 2013ರಲ್ಲಿ ಮೋದಿ ಗುಜರಾತ್​ನ ಮುಖ್ಯಮಂತ್ರಿಯಾಗಿದ್ದಾಗ ನಡೆದ ಇದೇ ರೀತಿಯ ಘಟನೆಯನ್ನೂ ನೆನಪಿಸಿಕೊಂಡು ರಾಹುಲ್​ ಗಾಂಧಿಯೊಂದಿಗೆ ಮೋದಿಯವರನ್ನು ಹೋಲಿಸಿದ್ದಾರೆ.

ಇಂತಹ ಘಟನೆಯೊಂದು  ಮೋದಿಯವರು ಭಾಷಣ ಮಾಡುತ್ತಿದ್ದಾಗಲೂ ನಡೆದಿತ್ತು  ಆದರೆ ಮೋದಿ ಅದನ್ನು ನೋಡಿದರೂ ಏನೂ ಆಗೇ ಇಲ್ಲ ಎಂಬಂತೆ ತಮ್ಮ ಮಾತನ್ನು ಮುಂದುವರಿಸಿದ್ದರು ಎಂದು ಟೀಕಿಸಿದ್ದಾರೆ. 

ಇಬ್ಬರು ವಿಡಿಯೋಗಳು ನೋಡಿ ನೆಟ್ಟಿಗರು ರಾಹುಲ ಗಾಂಧಿ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

One Response to "ವೈರಲ್ ಆದ ಮೋದಿ-ರಾಹುಲ ವಿಡಿಯೋ: ಕಾಂಗ್ರೆಸ್ ಅಧ್ಯಕ್ಷರ ನಡೆಗೆ ನೆಟ್ಟಿಗರು ಫುಲ್ ಫಿದಾ"

  1. Champakkji   January 25, 2019 at 11:38 pm

    Leader’s are born not made,Rahul ji proved it once again.

    Reply

Leave a Reply

Your email address will not be published.