ಬೈಲೂರು ನಿಷ್ಕಲಮಂಟಪಕ್ಕೆ ಸಕಲ ಬೆಂಬಲ: ಸಚಿವ ಸತೀಶ ಜಾರಕಿಹೊಳಿ ಭರವಸೆ


ಬೈಲಹೊಂಗಲ: ವಿಶ್ವಗುರು ಬಸವಣ್ಣನವರ ತತ್ವ -ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿರುವ  ಬೈಲೂರಿನ ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ತಮ್ಮ ಸಂಪೂರ್ಣ ಬೆಂಬಲ, ಸಹಕಾರ ಇರುತ್ತದೆ ಎಂದು ಅರಣ್ಯ , ಪರಿಸರ ಖಾತೆ ಸಚಿವ  ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ತಾಲೂಕಿನ ಬೈಲೂರು ಗ್ರಾಮದಲ್ಲಿರುವ ನಿಷ್ಕಲಮಂಟಪಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಬುದ್ಧ-ಬಸವ-ಅಂಬೇಡ್ಕರ್ ತತ್ವಾದರ್ಶಗಳನ್ನು ತಾವೂ ಕೂಡ ಪ್ರಚಾರಗೊಳಿಸುತ್ತಿದ್ದು, ಶ್ರೀ ನಿಜಗುಣಾನಂದ ಸ್ವಾಮೀಜಿಯವರು ಕೂಡ ಅದಕ್ಕೊಂದು ವೇದಿಕೆ ಕಲ್ಪಿಸಿಕೊಂಡು ಬಸವಣ್ಣನ ಆದರ್ಶಗಳನ್ನು ಜನರಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಇಂತಹ ಮಹಾನುಭಾವರ ತತ್ವಾದರ್ಶಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಲು ತಾವು ಯೋಜನೆ ಹಮ್ಮಿಕೊಂಡಿದ್ದು, ನಿಷ್ಕಲಮಂಟಪದ ಎಲ್ಲಾ ಚಟುವಟಿಕೆಗಳಿಗೆ ಬೆಂಬಲ, ಸಹಕಾರ ನೀಡಲಾಗುವುದು ಎಂದು ಹೇಳಿದರು.

ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಸದಾ ತಮ್ಮ ಬೆಂಬಲವಿರುತ್ತದೆ. ಸ್ವಾಮೀಜಿ ತೋರಿಸುವ ಪ್ರೀತಿಯನ್ನೇ ಜನರಿಂದಲೂ ನಿರೀಕ್ಷಿಸುವುದಾಗಿ ಅವರು ತಿಳಿಸಿದರು.

ಡಾ. ವಿ.ಎಸ್. ಸಾಧುನವರ, ಇನಾಮದಾರ, ಶಿವನಗೌಡ ಪಾಟೀಲ ,  ಮಾಜಿ ಶಾಸಕ ಎನ್ . ಎಚ್. ಕೋನರೆಡ್ಡಿ, ಶಿವನಸಿಂಗ್ ಮೊಕಾಶಿ, ಹಬೀಬ ಶಿಲ್ಲೇದಾರ ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.