ಉನ್ನತ ವರ್ಗದ ಬಡವರಿಗೂ ಮೀಸಲಾತಿ: ಮಾಯಾವತಿ ಏನಂದ್ರು ಗೊತ್ತಾ?!


ಹೊಸದಿಲ್ಲಿ: ಉನ್ನತವರ್ಗದ ಬಡವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10 ರಷ್ಟು ಮೀಸಲಾತಿ ನೀಡುವ ಕೇಂದ್ರದ ಕ್ರಮವನ್ನು  ಸ್ವಾಗತಿಸಿರುವ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಇದೊಂದು ರಾಜಕೀಯ ಗಿಮಿಕ್ ಎಂದೂ ಬಣ್ಣಿಸಿದ್ದಾರೆ.

ಕೇಂದ್ರ ಸರಕಾರವು ಕೈಗೊಂಡಿರುವ ನಿರ್ಣಯವು ಒಳ್ಳೆಯದೇ ಆಗಿದ್ದರೂ ನಿರ್ಣಯದ ಹಿಂದಿನ ಉದ್ದೇಶ ಸರಿಯಾಗಿಲ್ಲ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಾಗ ಈ ನಿರ್ಣಯ ಕೈಗೊಂಡಿರುವುದು ರಾಜಕೀಯ ನಡೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಮೊದಲೇ ಸರಕಾರ ಇಂತಹ ಮಹತ್ವದ ನಿರ್ಣಯ ಕೈಗೊಳ್ಳಬಹುದಾಗಿತ್ತು ಎಂದು ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಬಡವರಿಗೂ ಮೀಸಲು ವ್ಯವಸ್ಥೆ ವಿಸ್ತರಣೆಯಾಗಬೇಕು ಎಂದೂ ಮಾಯಾವತಿ ಒತ್ತಾಯಿಸಿದರು.

 

Leave a Reply

Your email address will not be published.