ಜನರ ಚಿತ್ತ ತಪ್ಪಿಸಲು ಮೇಲ್ವರ್ಗದವರಿಗೆ ಮೀಸಲಾತಿ ಹುನ್ನಾರ: ಪ್ರಕಾಶ ರಾಜ್


ಬೆಂಗಳೂರು: ದೇಶದ ಜನರ ಚಿತ್ತನ್ನು ತಪ್ಪಿಸುವುದಕ್ಕಾಗಿ ಮೇಲ್ವರ್ಗದವರಿಗೆ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ನೀಡಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ ರಾಜ್ ಹೇಳಿದ್ದಾರೆ. 

ಇಲ್ಲಿನ ಚಿತ್ರಕಲಾ ಪರಿಷತ್​ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ  ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲಿದ್ದೇನೆ. ಚುನಾವಣೆಯಲ್ಲಿ  ನಾನು ಯಾರ ಬೆಂಬಲವನ್ನೂ ಕೇಳಿಲ್ಲ. ಸಿಎಂ ಕೇಜ್ರಿವಾಲ್ ದೆಹಲಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.  ನನ್ನ ಬೆಂಬಲಕ್ಕೆ ಖುದ್ದಾಗಿಯೇ ಬರುತ್ತಾರೆ ಎಂದರು. 

ಚುನಾವಣಾ ಪ್ರಣಾಳಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಪಕ್ಷಗಳ ನಡುವೆ ಓಟು ಹಂಚಿಕೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಚುನಾವಣೆ ನಿಲುತ್ತಿದ್ದೇನೆ ಎಂದು ತಿಳಿಸಿದರು. 

Leave a Reply

Your email address will not be published.