ನೀರಿಗಾಗಿ ನೀರೆಯರ ಹೋರಾಟ!


ಕಲಬುರಗಿ: ನಗರದ ಕುಸನೂರು ರಸ್ತೆಯ ತಿಲಕನಗರ ಜಿಡಿಎದಲ್ಲಿ ನಿತ್ಯವೂ ನೀರಿಗಾಗಿ ಪರದಾಟ ನಡೆದಿದೆ.

ನೀರಿನ ಪೈಪ್ ಲೈನ್ ದುರಸ್ತಿಗಾಗಿ ಹಲವಾರು ವರ್ಷಗಳಿಂದ  ಪಾಲಿಕೆಯ ಸದಸ್ಯರಿಗೆ ಹಾಗೂ ನೀರು ಸರಬರಾಜು ಮಂಡಳಿಯ ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದಾರೆ.
ಅಲ್ಲದೆ ಬಡಾವಣೆಯ ಮಹಿಳೆಯರು ಇತ್ತೀಚೆಗೆ ಕಚೇರಿಗೆ ಮುತ್ತಿಗೆ ಹಾಕಿದರೂ ಯಾವುದೇ ಪೈಪ್ ಲೈನ್ ದುರಸ್ತಿ ಆಗಿಲ್ಲ. ಪಾಲಿಕೆಯ ಸದಸ್ಯರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಮಹಿಳೆಯರು ಶಪಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಬಡಾವಣೆಯ ಮಹಿಳೆಯರು ಎಚ್ಚರಸಿದರು.

Leave a Reply

Your email address will not be published.