ಪ್ರಾಣದ ಹಂಗು ತೊರೆದು ರೈಲು ಪ್ರಯಾಣಿಕರನ್ನು ಅವರು ಹೇಗೆ ರಕ್ಷಿಸಿದ್ರು ಗೊತ್ತಾ?:ವಿಡಿಯೋ ವೈರಲ್ !


ಬೆಳಗಾವಿ: ಯುವಕರಿಬ್ಬರ ಸಮಯಪ್ರಜ್ಞೆಯಿಂದ ರೈಲು ಹಳಿ ತಪ್ಪುವ ಅನಾಹುತವೊಂದನ್ನು ತಡೆಹಿಡಿದ ಕುತೂಹಲಕಾರಿ ಪ್ರಕರಣ ಜಿಲ್ಲೆಯ ಖಾನಾಪುರದಿಂದ ವರದಿಯಾಗಿದೆ.

ಕೊಲ್ಹಾಪುರದಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ರೈಲಿನಲ್ಲಿ ಸುಮಾರು 1500 ಜನರು ಪ್ರಯಾಣಿಸುತ್ತಿದ್ದರು. ಖಾನಾಪುರ ಸಮೀಪದ ಗಾಂಧಿನಗರ ಬಳಿ ಮರವೊಂದು ಹಳಿಗಳ ಮೇಲೆ ಉರುಳಿಬಿದ್ದಿತ್ತು. ಇದನ್ನು ಗಮನಿಸಿದ ರಿಯಾಜ್ ಮತ್ತು ತೌಫೀಕ್ ಎಂಬ ಯುವಕರು ತಕ್ಷಣ ರೈಲಿಗೆ ಎದುರು ಓಡಿ ಹೋಗಿ ಅದನ್ನು ನಿಲ್ಲಿಸಿದರು.

ಈ ಮೂಲಕ ರೈಲು ಹಳಿ ತಪ್ಪುವುದನ್ನು  ತಡೆದ ಯುವಕರು ನೂರಾರು ಜನರ ಪ್ರಾಣ ರಕ್ಷಣೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಪ್ರಾಣದ ಹಂಗು ತೊರೆದು ಈ ಕಾರ್ಯ ಮಾಡಿದ ಇಬ್ಬರೂ ಯುವಕರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಸಂತೋಷ ವ್ಯಕ್ತವಾಗಿದೆ.

Leave a Reply

Your email address will not be published.