ಬೆಳಗಾವಿಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ದ: ಸತೀಶ ಜಾರಕಿಹೊಳಿ


ಬೆಳಗಾವಿ: ಬೆಳಗಾವಿಯ ಸರ್ವಾಂಗೀಣ ಅಭಿವೃದ್ದಿಗೆ ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅರಣ್ಯ, ಪರಿಸರ ಹಾಗೂ ಜೈವಿಕ ಖಾತೆ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ರೈಲ್ವೆ ಮೂರನೇ ಗೇಟ್ ನಲ್ಲಿ ಮೇಲುಸೇತುವೆ ನಿರ್ಮಾಣಕ್ಕಾಗಿ ರವಿವಾರ ನಡೆದ ಭೂಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 20-30 ವರ್ಷಗಳ ಅವಧಿಯಲ್ಲಿ 4 ಮೇಲುಸೇತುವೆಗಳಿಗೆ ಬೇಡಿಕೆ ಇತ್ತು. ಈಗಾಗಲೇ ಮೂರು ಮೇಲುಸೇತುವೆ  ಕಾಮಗಾರಿಗಳು ಮುಗಿದಿದ್ದು, ನಾಲ್ಕನೇ ಮೇಲುಸೇತುವೆ ಕಾಮಗಾರಿ ಬೇಗನೆ ಮುಗಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಸುರೇಸ ಅಂಗಡಿಯವರು ಮೇಲು ಸೇತುವೆ ಕಾಮಗಾರಿ ಉಸ್ತುವಾರಿಯನ್ನು ಅತ್ಯಂತ ಕಾಳಜಿಯಿಂದ ನಿಭಾಯಿಸುತ್ತಾರೆ ಎಂದೂ ಸಚಿವರು ಭರವಸೆ ವ್ಯಕ್ತಪಡಿಸಿದರು.

ಮೊದಲ ಮತ್ತು ಎರಡನೇ ಗೇಟ್ ನಲ್ಲಿ ಮತ್ತೆರಡು ಮೇಲುಸೇತುವೆ  ನಿರ್ಮಾಣಕ್ಕಾಗಿ ಪ್ರಯತ್ನ ಮಾಡುವುದಾಗಿಯೂ ಅವರು ತಿಳಿಸಿದರು.

ಸಂಸದ ಸುರೇಶ ಅಂಗಡಿ, ಅನಿಲ ಬೆನಕೆ, ಅಭಯ ಪಾಟೀಲ, ಮೇಯರ್ ಬಸವರಾಜ ಚಿಕ್ಕಲದಿನ್ನಿ , ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ,  ಜಿಲ್ಲಾಧಿಕಾರಿ ಬೊಮ್ಮನಹಳ್ಳಿ, ರೈಲ್ವೆ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸದಸ್ಯರು ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.