ಬೆಂಗಳೂರು: ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ


ಬೆಂಗಳೂರು: ಮಾನವ ಬಂಧುತ್ವ ವೇದಿಕೆ ಕರ್ನಾಟಕ ಮತ್ತು ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. 

ಇಲ್ಲಿನ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ವಿದ್ಯಾರ್ಥಿ ನಿಲಯದ ಜ್ಞಾನ ಭಾರತಿ ಆವರಣದಲ್ಲಿ ಗುರುವಾರ ರಾತ್ರಿ ಫುಲೆ ದಂಪತಿಯ ಭಾವಚಿತ್ರಗಳ ಮುಂದೆ ದೀಪ ಬೆಳಗಿಸಿ ಜಯಂತಿ ಆಚರಿಸಿದರು.  

ಈ ಸಂದರ್ಭದಲ್ಲಿ ನಿಲಯಪಾಲಕ ಪ್ರೋ ರಾಜೇಶ ನಾಯಕ, ವ್ಯವಸ್ಥಾಪಕ ಲಕ್ಷ್ಮಣಯ್ಯ, ವಿದ್ಯಾರ್ಥಿ ಬಂಧುತ್ವ ವೇದಿಕೆ ಸಂಚಾಲಕರಾದ ತೋಳಿ ಭರಮಣ್ಣ , ಸ್ನಾತಕೋತ್ತರ ವಿದ್ಯಾರ್ಥಿಗಳ ವೀರೆಶ ನಾಯಕ, ಲೋಕೆಶ , ಇನ್ನಿತರರು ಇದ್ದರು.

Leave a Reply

Your email address will not be published.