ಕಡೋಲಿಯಲ್ಲಿ ಶಿವಾಜಿ ಮಹಾರಾಜ ಪ್ರತಿಮೆ ಅನಾವರಣ: ಕುಣಿದು ಕುಪ್ಪಳಿಸಿದ ಅಭಿಮಾನಿಗಳು


ಬೆಳಗಾವಿ: ಕಡೋಲಿ ಗ್ರಾಮ ಪಂಚಾಯಿತಿ ಎದುರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕೇಂದ್ರ ಮಾಜಿ ಸಚಿವ ಶರದ್ ಪವಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ  ಸತೀಶ ಜಾರಕಿಹೊಳಿ ಸೇರಿದಂತೆ ಹಲವು ಗಣ್ಯರು ಲೋಕಾರ್ಪಣೆಗೊಳಿಸಿದರು.

ಕಡೋಲಿ ಗ್ರಾಮದಲ್ಲಿ ಸಂಭ್ರಮದ ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಕೇಸರಿ ಪೇಟ ಕಂಗೊಳಿಸುತ್ತಿದ್ದವು. ಶಿವಾಜಿ ಮಹಾರಾಜರ ಅಭಿಮಾನಿಗಳು ಅಂತ್ಯಂತ ಉತ್ಸಾಹದಿಂದ ನೆರೆದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಯುವತಿಯರು ಡೋಲ್ ಪಾತಾಕ್ ಬಾರಿಸಿ ಕುಣಿದು ಕುಪ್ಪಳಿಸಿದರು. ಕುಂಭ ಹೊತ್ತ ಮಹಿಳೆಯರು ಬೃಹತ್ ಮರವಣಿಗೆ ನಡೆಸಿ ಸಮಾರಂಭಕ್ಕೆ ಮೆರಗು ತಂದರು. ಜಿಲ್ಲಾದ್ಯಂತದಿಂದ ಜನರು ಭಾಗಿಯಾಗಿದ್ದರು.

ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಗಣೇಶ ಹುಕ್ಕೇರಿ, ಶ್ರೀಮಂತ ಪಾಟೀಲ್, ಡಾ. ಅಂಜಲಿ ನಿಂಬಾಳ್ಕರ್, ಲಕ್ಷ್ಮಿ ಹೆಬ್ಬಾಳಕರ್, ಮಹಾರಾಷ್ಟ್ರದ ಶಾಸಕಿ  ಸಂಧ್ಯಾತಾಯಿ, ದುರುದುಂಡೇಶ್ವರ್ ಮಠದ ಗುರುಬಸವಲಿಂಗ ಸ್ವಾಮೀಜಿ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಒಂದು ಕೋಟಿ ರೂ. ವೆಚ್ಚದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸಿದ್ದಪಡಿಸಲಾಗಿತ್ತು. ಸುಮಾರು 12 ಅಡಿ ಎತ್ತರವಿದೆ. ಮುಂಬೈ ಮೂಲಕ ಕಲಾಕಾರ ಮೂರ್ತಿ ತಯಾರಿಸಿದ್ದು, ಸಮಾರಂಭದಲ್ಲಿ ಅವರಿಗೆ ಸಚಿವ ಸತೀಶ ಜಾರಕಿಹೊಳಿ ಸನ್ಮಾನಿಸಿದರು.

Leave a Reply

Your email address will not be published.