ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ!


ತುಮಕೂರು: ನಿನ್ನೆ 11.44 ಕ್ಕೆ  ಶಿವೈಕ್ಯರಾದ ಸಿದ್ದಗಂಗಾ ಮಠದ “ತ್ರಿವಿಧ ದಾಸೋಹಿ”, “ಕರ್ನಾಟಕ ರತ್ನ” ಡಾ. ಶಿವಕುಮಾರ ಸ್ವಾಮೀಜಿ  ಅಂತಿಮ  ದರ್ಶನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ.

ಶ್ರೀಗಳ ಶಿವೈಕ್ಯ ಸುದ್ದಿ ತಿಳಿದಾಗಿನಿಂದ ರಾಜ್ಯ ಸರಕಾರವೇ ಮಠದಲ್ಲಿ ಬೀಡು ಬಿಟ್ಟಿದ್ದು, ಇಂದು ಸಂಜೆ  4 ಗಂಟೆಯವರೆಗೆ ಕ್ರಿಯಾ ಸಮಾಧಿ ನೆರವೇರಲಿದೆ.

ಮಧ್ಯಾಹ್ನ 1 . 2 ಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀಗಳ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. 1.5 ಕ್ಕೆ ಯೋಗಗುರು ರಾಮದೇವ್ ಬಾಬಾ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು.  ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮ್, ಪಾಂಡಿಚೇರಿ ಸಿಎಂ ವಿ. ನಾರಾಯಣಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ,  ಮಾಜಿ ಸಿಎಂ ಎಸ್.ಎಂ ಕೃಷ್ಣ  ಸೇರಿದಂತೆ ಹಲವಾರು ಗಣ್ಯರು ಶ್ರೀಗಳ ಅಂತಿಮ  ದರ್ಶನ ಪಡೆದುಕೊಂಡರು. ಬೆಳಗ್ಗೆ ಇಂದ 5 ಲಕ್ಷಕ್ಕೂ ಹೆಚ್ಚು ಜನ  ಅಂತಿಮ ದರ್ಶನ ಪಡೆದಿದ್ದು, ಇನ್ನು ಲಕ್ಷಾಂತರ ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಶ್ರೀಗಳ ಅಂತಿಮ ದರ್ಶನ ಪಡೆದ ಬಳಿಕ ಯೋಗಗುರು ರಾಮದೇವ ಬಾಬಾ ಸುದ್ದಿಗಾರರೊಂದಿಗೆ ಮಾತನಾಡಿ, ಸಂತ ಪರಂಪರೇಯಲ್ಲಿಯೇ ಶಿವಕುಮಾರ ಸ್ವಾಮೀಜಿ ಶ್ರೇಷ್ಟರು. ಶ್ರೀಗಳಿಗೆ  “ಭಾರತ ರತ್ನ” ನೀಡುವ ವಿಚಾರವಾಗಿ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಅಲ್ಲದೇ ಸರಕಾರಕ್ಕೆ ಪತ್ರ ಬರೆದು ಶ್ರೀಗಳಿಗೆ “ಭಾರತ ರತ್ನ” ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published.