ಶರದ್ ಪವಾರ್,ಸಚಿವ ಸತೀಶ ಜಾರಕಿಹೊಳಿಯನ್ನು ಬಣ್ಣಿಸಿದ ಮಾಜಿ ಸಿಎಂ ಸಿದ್ದರಾಮಯ್ಯ


ಬೆಳಗಾವಿ(ಕಡೋಲಿ): ಮೌಢ್ಯ ವಿರೋಧಿ, ಸಾಮಾಜಿಕ  ಕಳಕಳಿ, ಜನಪರ ಕಾಳಜಿ, ಹುಟ್ಟು ಹೋರಾಟಗಾರ ಹೀಗೆ ನಾನಾ ಪದಗಳಿಂದ  ಮಾಜಿ ಸಿಎಂ ಸಿದ್ದರಾಮಯ್ಯ,  ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬಣ್ಣಿಸಿದ ಪರಿಯಿದು.

ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮ ಪಂಚಾಯಿತಿ ಎದುರುಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಢ ಪ್ರತಿಮೆ ಲೋಕಾರ್ಪಣೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ನಾನು ಬಸವಣ್ಣನವರನ್ನು ನಂಬಿದ್ದೇನೆ, ಅವರ ಮಾರ್ಗದಲ್ಲಿ ಸಾಗುತ್ತಿದ್ದೇನೆ. ಎಲ್ಲ ಜಾತಿ ಪರ ಇರುವ ವ್ಯಕ್ತಿ ನಾನು. ಬಸವಣ್ಣ ಕರ್ಮ ಸಿದ್ದಾಂತ ವಿರೋಧ ಮಾಡಿದವರು. ನಮ್ಮ ಸರಕಾರದ ಅವಧಿಯಲ್ಲಿ ಮೌಢ್ಯ ವಿರೋಧಿ ಕಾಯ್ದೆ ಜಾರಿಗೊಳಿಸಿದ್ದೇವೆ, ಜನರು ಮೌಢ್ಯದಿಂದ ಹೊರ ಬರಲಿ. ಸತೀಶ ಜಾರಕಿಹೊಳಿ ಕೂಡ ಕೆಳ ವರ್ಗದ, ಸಮಾಜದಲ್ಲಿ ತುಳಿತಕ್ಕೊಳಗಾದವ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಸದಾ ನಿಮ್ಮ ಬೆಂಬಲವಿರಲಿ.  ಛತ್ರಪತಿ ಆದರ್ಶಗಳು ನಮಗೆ ಸ್ಪೂರ್ತಿ ನೀಡಲಿ ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಶರದ್ ಪವಾರ್ ಆರೋಗ್ಯ ಚೆನ್ನಾಗಿರಲೆಂದು ದೇವರಲ್ಲಿ ಪ್ರಾರ್ಥಿಸಿದ ಸಿದ್ದು:

ಇನ್ನು ಕೇಂದ್ರ ಮಾಜಿ ಸಚಿವ ಶರದ್ ಪವಾರ ಕುರಿತು ಮಾತನಾಡಿದ ಮಾಜಿ ಸಿಎಂ, ಶರದ್ ಪವಾರ್ ಅವರು ದೇಶಕಂಡ ಅಪ್ರತಿಮ ನಾಯಕ. ನನಗೆ ಅವರ ಭಾಷಣ ಕೇಳಬೇಕಿತ್ತು. ಆದರೆ ಕಾರಣಾಂತರಗಳಿಂದ ಸ್ವಲ್ಪ ತಡವಾಯಿತು. ಅವರ ಭಾಷಣ ಕೇಳಲಾಗಲಿಲ್ಲ.

ಶರದ್ ಪವಾರ ಅವರು ಜೀವನದೂದ್ದಕ್ಕು ರೈತರ, ಕೆಳ ವರ್ಗದ ಸಾಮಾಜಿಕ ನ್ಯಾಯ ಪರವಾಗಿ  ಹೋರಾಟ ಮಾಡಿಕೊಂಡು ಬಂದಿದ್ದಾರೆ. ಮುಂದೆಯೂ ಹೋರಾಟ ಮಾಡುತ್ತಾರೆ, ಅವರ ಆರೋಗ್ಯ ಚೆನ್ನಾರಲಿ ಎಂದು ಸಿದ್ದರಾಮಯ್ಯ ದೇವರಲ್ಲಿ ಪಾರ್ಥಿಸಿದರು.

ಅರಣ್ಯ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಮಾಜಿ ಸಚಿವ ಶರದ್ ಪವಾರ್ ಮಾತನಾಡಿದರು.

ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಗಣೇಶ ಹುಕ್ಕೇರಿ, ಶ್ರೀಮಂತ ಪಾಟೀಲ್, ಡಾ. ಅಂಜಲಿತಾಯಿ ನಿಂಬಾಳಕರ್, ಲಕ್ಷ್ಮಿ ಹೆಬ್ಬಾಳಕರ್, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಪ ಮೇಯರ್ ಮಧುಶ್ರೀ ಪೂಜಾರಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಲಕ್ಷ್ಮಣರಾವ್ ಚಿಂಗಳೆ ಇತರರು ಇದ್ದರು.

Leave a Reply

Your email address will not be published.