ದಲಿತರು, ಮುಸ್ಲಿಂರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಚಿಂತಕ ನಜ್ಮಾ


ತಾಳಿಕೋಟೆ: ದಲಿತರು ಹಾಗೂ ಮುಸ್ಲಿಂ ಸಮುದಾಯ ಹಿಂದಿನಿಂದಲೂ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು,  ಸಮಸ್ಯಗಳಿಗೆ ತೆರೆ ಎಳೆಯುವ ಕಾರ್ಯ ನಡೆಯದೇ ಇನಷ್ಟು ಕೆಳಮಟ್ಟಕ್ಕೊತ್ತುವ ಕೆಲಸ ನಡೆಯುತ್ತಿದೆ ಎಂದು ಬೆಂಗಳೂರಿನ ಪ್ರಗತಿಪರ ಚಿಂತಕ ನಜ್ಮಾ ನಜೀರ ಚಿಕ್ಕನೆರಳೆ ವಿಷಾದ ವ್ಯಕ್ತಪಡಿಸಿದರು.

ಸ್ಥಳೀಯ ಶಾದಿ ಮಹಲ್‍ನಲ್ಲಿ ಮಂಗಳವಾರರಂದು ನಡೆದ ದಲಿತ ಮತ್ತು ಮುಸ್ಲಿಂ ಐಕ್ಯತಾ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿ, ಜೋತಿಬಾ ಪುಲೆ, ಸಾವಿತ್ರಿಬಾಯಿ ಅವರ ತತ್ವ ಸಿದ್ದಾಂತಗಳನ್ನು ಅರಿತುಕೊಳ್ಳಬೇಕಾಗಿದೆ.ದಲಿತರು ಹಾಗೂ ಮುಸ್ಲಿಂರು ಒಂದಾಗಿ ನಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗಿದೆ. ಎಲ್ಲಿಯವರೆಗೆ ಎರಡೂ ಜನಾಂಗದವರು ಒಗ್ಗಟ್ಟಾಗಿ ಹೋರಾಡುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ ಎಂದರು.

ಉಪನ್ಯಾಸಕ ಸುಭಾಷ ಶೀಲವಂತ ಮಾತನಾಡಿ, ಬುದ್ದ, ಬಸವ, ಅಂಬೇಡ್ಕರ್, ಜ್ಯೋತಿಬಾ ಫುಲೆ ಹಲವು ಮಹಾ ಪುರುಷರು  ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕಿದೆ ಎಂದರು. ನ್ಯಾ. ಎಂ.ಕೆ.ಮ್ಹೇತ್ರಿ ಅವರು ಮಾತನಾಡಿದರು.

ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದು ಎರಡು ನಿಮಿಷ ಮೌನ ಆಚರಿಸುವದರೊಂದಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಖಾಜಾ ಹುಸೇನ ಡೋಣಿ, ಬೆಂಗಳೂರ ಡಿಎಂಎಸ್ ರಾಜ್ಯಾಧ್ಯಕ್ಷ ಶಿವರಾಜ ದೇಶಮುಖ,  ಸೈಯದ ಶಕೀಲ್‍ಅಹ್ಮದ ಖಾಜಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ,  ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಜಾಕ ಮನಗೂಳಿ, ಮುಸ್ಲಿ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಆದಮ್ಮ ಅತ್ತಾರ, ರಾಮಣ್ಣ ಕಟ್ಟಿಮನಿ, ದ.ಸೇ.ತಾಲೂಕಾಧ್ಯಕ್ಷ ಬಸವರಾಜ ಗುಂಡಕನಾಳ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ನಾಗೇಶ ಕಟ್ಟಿಮನಿ, ಸಿದ್ದು ಬಾರಿಗಿಡದ, ಮೂಹಿಬೂಬ ಚೋರಗಸ್ತಿ, ಗೋಪಾಲ ವಿಜಾಪೂರ, ಮೋದಿನಸಾ ನಗಾರ್ಚಿ ಇತರರು ಇದ್ದರು.

Leave a Reply

Your email address will not be published.