ಕಾಂಗ್ರೆಸ್ಸಿನಲ್ಲಿ ಅತೃಪ್ತರು ಯಾರು: ಯಡಿಯೂರಪ್ಪ ಹೀಗೇಕೆ ಕೇಳಿದ್ರು ಗೊತ್ತಾ?


ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರು ಯಾರಿದ್ದಾರೆ ಎಂಬುದೇ ತಮಗೆ ಗೊತ್ತಿಲ್ಲ ಎಂದು ಭಾರತೀಯ ಜನತಾಪಕ್ಷದ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಆ ಅತೃಪ್ತರು ಯಾರು ಎಂದು ಹೆಸರು ಹೇಳಿದರೆ ತಾವೇ ಅವರನ್ನು ಭೇಟಿ ಮಾಡುವುದಾಗಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ತಾವು ಹೇಳಿದ್ದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಕಾಂಗ್ರೆ್ಸ್ಸಿನ ಕೈಯಲ್ಲಿ ಸಿಕ್ಕು ಆಡಳಿತ ನಡೆಸಬೇಕಾಗಿದೆ ಎಂದು ಅವರು ಹೇಳಿದ್ದು ಮಾಧ್ಯಮಗಳಲ್ಲಿ ಬಂದಿತ್ತು. ಅದನ್ನೇ ಮೋದಿ ಹೇಳಿದರೆ ಅವರಿಗೇಕೆ ಕಿರಿ ಕಿರಿ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

Leave a Reply

Your email address will not be published.