ವೈರಲ್ ವಿಡಿಯೋ: ಪಾಕ್ ಹಿಡಿತದಲ್ಲಿ ವಿಂಗ್ ಕಮಾಂಡರ್ ಅಭಿನಂದನ? ನೆಟ್ಟಿಗರಿಂದ ಪ್ರಾರ್ಥನೆ, ಆಕ್ರೋಶ


ಹೊಸದಿಲ್ಲಿ: ಪಾಕಿಸ್ತಾನ ಗಡಿ ದಾಟಿ ಉಗ್ರರ ನಾಶ ಮಾಡಿದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನ ವಶದಲ್ಲಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ. 

ಪಾಕಿಸ್ತಾನ ಬಿಡುಗಡೆಗೊಳಿಸಿರುವ ವಿಡಿಯೋಗಳಲ್ಲಿ ಅಭಿನಂದನರನ್ನು  ಸೆರೆ ಹಿಡಿದು ಥಳಿಸಿ ಮತ್ತು ವಿಚಾರಿಸುತ್ತಿರುವುದು ಕಾಣಿಸಿಕೊಂಡಿದ್ದು ಅವರು ಸುರಕ್ಷಿತವಗಿ ಮರಳಿ ದೇಶಕ್ಕೆ ಬರಲಿ ಎಂದು ದೇಶದ ಜನ ಪ್ರಾರ್ಥಿಸುತ್ತಿದ್ದಾರೆ.

ಒಂದು ಕಡೆ ರಹಸ್ಯವಾಗಿ ನಡೆಯಬೇಕಾದ ಕಾರ್ಯಾಚರಣೆಯನ್ನು ಬೀದಿಯಲ್ಲಿ ತೋರಿಸಿಕೊಂಡು ರಾಜಕೀಯಗೊಳಿಸಿ ಮತ ಬ್ಯಾಂಕ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದವರಿಗೆ ಸೈನಿಕರ ಪ್ರಾಣ ದಾಳಗಳಂತೆ ಕಾಣುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಏನೇ ಇರಲಿ… ಈ ವಿಡಿಯೋ ಸತ್ಯವಾದಲ್ಲಿ ಭಾರತೀಯ ಸೈನಿಕನ ಪ್ರಾಣ ಮಾತ್ರ ರಕ್ಷಣೆಯಾಗಬೇಕು. ಸರ್ಕಾರ ಕ್ರಮ ಕೈಗೊಂಡು ಅಭಿನಂದನ್ ಅವರನ್ನು ಪಾಪಿ ಪಾಕಿಸ್ತಾನ ಹಿಡಿತದಿಂದ ಬಿಡುಗಡೆಗೊಳಿಸಲು ಯತ್ನಿಸಬೇಕು. 

Leave a Reply

Your email address will not be published.