ಬೆಂಕಿ ಅವಘಡವಾಗಿದ್ದರೂ ನಾಳೆ ಏರ್ ಶೋ ನಿಲ್ಲುವುದಿಲ್ಲ!


ಬೆಂಗಳೂರು: ಯಲಹಂಕ ವಾಯುನೆಲೆಯ ಪಾರ್ಕಿಂಗ್ ಸ್ಥಳದಲ್ಲಿ ಇಂದು ಭಾರೀ ಅಗ್ನಿ ಅವಘಡ ನಡೆದು, 300 ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿರುವ ನಡುವೆಯೇ ನಾಳೆ ಎಂದಿನಂತೆ ಏರ್ ಶೋ ನಡೆಯಲಿದೆ.

ಏರ್ ಶೋ ನಡೆಯುವ ಜಾಗ ಮತ್ತು ಪಾರ್ಕಿಂಗ್ ಜಾಗೆಯ ನಡುವೆ ಸಾಕಷ್ಟು ಅಂತರವಿರುವುದರಿಂದ ಏರ್ ಶೋ ನಿಲ್ಲಿಸುವ ಅವಶ್ಯಕತೆ ಇಲ್ಲ ಎಂದು ಡಿಫೆನ್ಸ್ ಪಿಆರ್ ಒ ಗುರುಪ್ರಸಾದ ತಿಳಿಸಿದ್ದಾರೆ.

ಏರ್ ಶೋ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದೂ ಅ ವರು ತಿಳಿಸಿದರು.

ಏತನ್ಮಧ್ಯೆ ಕಾರುಗಳಲ್ಲಿ ಕೆಲವರು ದಾಖಲೆಗಳು, ಲೈಸನ್ಸ್ , ಪಾಸ್ ಪೋರ್ಟ್ ಇತ್ಯಾದಿಗಳನ್ನು ಕಳೆದುಕೊಂಡಿದ್ದು, ಕಾರು ದಾಖಲೆಗಳನ್ನು ಹೊಸದಾಗಿ ಮಾಡಿಕೊಡುವುದಾಗಿ ಸಾರಿಗೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಮೆ ಇದ್ದವರಿಗೆ ಅದನ್ನು ಕೊಡಿಸಿ ಕೊಡಲು ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಸಹಕಾರ ನೀಡುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published.