ಬಿಜೆಪಿ ಗದ್ದಲ: ವಿಧಾನ ಸಭೆ ಕಲಾಪವೂ ಮುಂದೂಡಿಕೆ


ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಬಜೆಟ್ ಅಧಿವೇಶನದ ಎರಡನೇ ದಿನವೂ ಬಿಜೆಪಿ ಸದಸ್ಯರು ಬಾವಿಗಿಳಿದು ಧರಣಿ ಮುಂದುವರಿಸಿದ್ದು, ಗದ್ದಲದ ನಡುವೆಯೇ ಸಿಎಂ ಭಾಷಣ ಆರಂಭಿಸಿದ್ದರಾದರೂ ಗದ್ದಲದ ಪರಿಣಾಮ ಕಲಾಪವನ್ನು ಹತ್ತು ನಿಮಿಷ ಮುಂದೂಡಲಾಗಿದೆ.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಭಾಷಣ ಆರಂಭಿಸಿರುವ ಸಿಎಂ ಮಾತು ಯಾರಿಗೂ ಕೇಳಲಾರದಷ್ಟು ಗದ್ದಲ ಸದನದಲ್ಲಿ ನಡೆದಿದ್ದರಿಂದ ಸಭಾಪತಿ ರಮೇಶಕುಮಾರ್ ಕಲಾಪ ಮುಂದೂಡಿದರು.

ಏತನ್ಮಧ್ಯೆ ಕಾಂಗ್ರೆಸ್ ಪಕ್ಷದ ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಬಿ. ನಾಗೇಂದ್ರ, ಗಣೇಶ ಹಾಗೂ ಡಾ. ಉಮೇಶ ಜಾಧವ ಈ ಐವರೂ ಶಾಸಕರು ಸದನಕ್ಕೆ ಗೈರು ಹಾಜರಾಗಿದ್ದು, ಸರಕಾರ ಅಲ್ಪಮತಕ್ಕಿಳಿಯುವ ಭೀತಿ ಎದುರಿಸುತ್ತಿದೆ.

Leave a Reply

Your email address will not be published.