ದೇವದಾಸಿಯರ ಮಕ್ಕಳಿಗೆ ಮದುವೆ: ಬಾಗಲಕೋಟೆ ಜಿಲ್ಲಾಡಳಿತ ಕ್ರಾಂತಿಕಾರಕ ಹೆಜ್ಜೆ!


ಬಾಗಲಕೋಟೆ:  ದೇವದಾಸಿ ಪದ್ದತಿ ನಿರ್ಮೂಲನೆಗಾಗಿ ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ದೇವದಾಸಿ ಮಕ್ಕಳ ಮದುವೆ ಮಾಡಿಸುವ ಮೂಲಕ ಬಾಗಲಕೋಟೆ ಜಿಲ್ಲಾಡಳಿತ ಹೊಸ  ಇತಿಹಾಸಕ್ಕೆ ನಾಂದಿ ಹಾಡಿದೆ.

ಇಲ್ಲಿನ ನವನಗರದ ಕಲಾಭವನದಲ್ಲಿ  ಹೈಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ಈ ವಿವಾಹ ಕಾರ್ಯಕ್ರಮ ನಡೆದಿದ್ದು, ಲಲಿತಾ- ರಾಜು ಮತ್ತು ರೇಖಾ ಗುಂಡಪ್ಪ ಎಂಬ ಜೋಡಿಗಳು ವಿವಾಹ ಬಂಧನಕ್ಕೊಳಗಾದರು.  ಈ ವಿವಾಹ ಕಾರ್ಯಕ್ರಮಕ್ಕೆ  ಹೈಕೋರ್ಟ್ ನ್ಯಾಯಾಧೀಶ ಅರವಿಂದ, ದೇವದಾಸಿ ಪುನರ್ ನಿರ್ಮಾಣ ಅಧಿಕಾರಿಗಳು, ಸಿಇಒ ಗಂಗೂಬಾಯಿ ಮಾನಕರ್, ಹಾಗೂ ಎಸ್​​ಪಿ ಸಿ.ಬಿ.ರಿಷ್ಯಂತ್ ಸಾಕ್ಷಿಯಾದರು, ಅಲ್ಲದೇ ನವ ಜೋಡಿಗಳಿಗೆ ಶುಭ ಕೋರಿದರು.

ವಿಶೇಷ ಎಂದರೆ ಅಧಿಕಾರಿಗಳು  ವೇದಿಕೆಯಲ್ಲಿಯೇ ವಿವಾಹ ನೋಂದಣಿಯನ್ನು ಮಾಡಿಸಿದರು.  ನವ ಜೋಡಿಗಳು  ಅಧಿಕಾರಿಗಳ ಕಾಲಿಗೆ ಬಿದ್ದು, ಆಶೀರ್ವಾದ ಪಡೆದರು.

ದೇವದಾಸಿ ಮಕ್ಕಳನ್ನು ನೋಡುವ ದೃಷ್ಟಿ ಕೊನವೇ ಬೇರೆಯಾಗಿರುತ್ತೆ. ದೇವದಾಸಿ ಮಕ್ಕಳು ಸಮಾಜದಲ್ಲಿ ಗೌರವಯುತವಾಗಿ ಬದುಕಲು  ಅವಕಾಶ ಕಲ್ಪಸಿದ ಬಾಗಲಕೋಟೆ ಜಿಲ್ಲಾಡಳಿತ ಕಾರ್ಯ  ನಿಜಕ್ಕೂ ಶ್ಲಾಘನೀಯ.

Leave a Reply

Your email address will not be published.